ನೀವು ಯುಪಿಐ ಪಾವತಿ ಮಾಡಿದಾಗ ನಿಮ್ಮ ಬ್ಯಾಂಕ್, ನಿಮ್ಮ ಪರವಾಗಿ ದಿನದ ಅಂತ್ಯಕ್ಕೆ ಪಾವತಿಯ ಮೊತ್ತವನ್ನು ಇತ್ಯರ್ಥ ಮಾಡುತ್ತದೆ. ಡಿಜಿಟಲ್ ಪಾವತಿಗಳಾದ ಯುಪಿಐ ಇತ್ಯಾದಿಗಳು ಎಲೆಕ್ಟ್ರಾನಿಕ್ ಸೂಚನೆಗಳ ಸ್ವರೂಪದ್ದಾಗಿದ್ದುಘಿ, ಹಣಕಾಸು ವರ್ಗಾವಣೆಗಳನ್ನು ನಡೆಸಲು ಬ್ಯಾಂಕ್‌ಗಳಿಗೆ ಮಧ್ಯವರ್ತಿ ಸಾಧನಗಳಾಗಿ ಬಳಕೆಯಾಗುತ್ತವೆ. ಇವುಗಳು ‘ನಗದು ರಹಿತ’ ಪಾವತಿಯ ಮಾದರಿಯಲ್ಲಿದ್ದರೂ, ಸರಕಾರ ಬಿಡುಗಡೆಗೊಳಿಸುವ ಕರೆನ್ಸಿ ಗಳ ವರ್ಗಾವಣೆಯನ್ನು ಒಳಗೊಂಡಿರುತ್ತದೆ.
ಈಗ ಒಂದು ಯುಪಿಐ ಮಾದರಿಯ ವ್ಯವಸ್ಥೆಯಲ್ಲಿ ಬ್ಯಾಂಕ್ ಬ್ಯಾಲೆನ್ಸ್‌ಗಳ ಬದಲಿಗೆ ಸೆಂಟ್ರಲ್ ಬ್ಯಾಂಕ್ ಬಿಡುಗಡೆಗೊಳಿಸುವ ಡಿಜಿಟಲ್ ಕರೆನ್ಸಿಯ ವರ್ಗಾವಣೆಯಾದರೆ ಹೇಗೆ ಎಂದು ಯೋಚಿಸಿ. ಆಗ ಅಂತರ ಬ್ಯಾಂಕ್ ಪಾವತಿ ಇತ್ಯರ್ಥ ವ್ಯವಸ್ಥೆ ಕಣ್ಮರೆಯಾಗುತ್ತದೆ. ನೀವು ಮೂರನೇ ಪಕ್ಷದ ಅಪಾಯ ಇಲ್ಲದೆಯೇ ಏನನ್ನಾದರೂ ಪಾವತಿಸಬೇಕಾದ ಆಯ್ಕೆ ಉಂಟಾಗುತ್ತದೆ. ಹಣವೇ ‘ಡಿಜಿಟಲ್’ ಆದಾಗ ಏನಾಗುತ್ತದೆ? ಆರ್‌ಬಿಐ ಕ್ರಿಪ್ಟೊಗಳ ಸಂಪೂರ್ಣ ನಿಷೇಧವನ್ನು ಪ್ರತಿಪಾದಿಸಿದೆ.
ಭಾಗಶಃ ನಿರ್ಬಂಧಗಳಿಂದ ಪರಿಣಾಮವಾಗದು ಎಂದಿದೆ. ಆದರೆ ಇದೇ ವೇಳೆ ಆರ್‌ಬಿಐ, ತನ್ನದೇ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲು ಪರಿಶೀಲಿಸುತ್ತಿದೆ. ಕ್ರಿಪ್ಟೊ ಹೊಂದಿರುವ ತಂತ್ರಜ್ಞಾನವನ್ನು ಅದು ಬಳಸಲು ಬಯಸಿದೆ. ‘‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಹೆಚ್ಚು ತ್ವರಿತವಾಗಿ ಮತ್ತು ವೆಚ್ಚದ ದೃಷ್ಟಿಯಿಂದಲೂ ದಕ್ಷತೆಯ ಜಾಗತಿಕ ಪಾವತಿ ವ್ಯವಸ್ಥೆಯಾಗಿ ಬಳಕೆಯಾಗಬಹುದು. ನಾನಾ ವಿಭಿನ್ನ ಸಮಯಗಳ ವಲಯಗಳೂ ಅಡಚಣೆಯಾಗಲಾರದು’’ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ.ರವಿ ಶಂಕರ್ ಕಳೆದ ವರ್ಷ ಭಾಷಣವೊಂದರಲ್ಲಿ ತಿಳಿಸಿದ್ದರು.
ಆರ್‌ಬಿಐ ಡಿಜಿಟಲ್ ಸ್ವರೂಪದಲ್ಲಿ ಸಿಬಿಡಿಸಿಗೆ ಕಾನೂನು ವ್ಯಾಖ್ಯಾನ ನೀಡಿದೆ. ‘‘ಇದು ಅಕೃತ ಕರೆನ್ಸಿಯಂತೆ ವ್ಯಕ್ತಿಯಿಂದ ವ್ಯಕ್ತಿಯ ನಡುವೆ ವಿನಿಮಯಕ್ಕೆ ಸಿಗಲಿದೆ. ಸ್ವರೂಪ ಮಾತ್ರ ಬೇರೆ’’ ಎನ್ನುತ್ತಾರೆ ಶಂಕರ್.
ಹಾಗಾದರೆ ನಗದು ಜನಪ್ರಿಯವಾಗಿರುವ ಭಾರತದಲ್ಲಿ ಸಿಬಿಡಿಸಿಯ ಅಗತ್ಯವಾದರೂ ಏನು? ಶಂಕರ್ ಅವರ ಪ್ರಕಾರ, ನಗದನ್ನು ಹೆಚ್ಚು ಬಳಸುತ್ತಿರುವ ರಾಷ್ಟ್ರಗಳು ಸಿಬಿಡಿಸಿ ಹೆಚ್ಚು ಪರಿಣಾಮಕಾರಿ ಎಂದು ಭಾವಿಸಿವೆ. ನಗದು ವಿತರಣೆಯ ವೆಚ್ಚವನ್ನೂ ಸಿಬಿಡಿಸಿಗಳು ಕಡಿಮೆ ಮಾಡಲಿವೆ.
ಕಳೆದೊಂದು ದಶಕದಿಂದ ಬಂದಿರುವ ಕ್ರಿಪ್ಟೊ ಕರೆನ್ಸಿಗಳು ಭದ್ರತೆಯ ದೃಷ್ಟಿಯಿಂದ ವಿಶ್ವಾಸದಾಯಕವೆನಿಸಿವೆ. ವರ್ಗಾವಣೆಗೆ ಕೂಡ ಪರಿಣಾಮಕಾರಿ ಎನ್ನಿಸಿವೆ. ಹೀಗಿದ್ದರೂ, ಅವುಗಳು ವಿಕೇಂದ್ರೀಕರಣವಾಗಿರುವುದರಿಂದ ಯಾವುದೇ ಪ್ರಾಕಾರ ಅವುಗಳನ್ನು ನಿಯಂತ್ರಿಸಲು ಆಗುವುದಿಲ್ಲಘಿ. ಖಾಸಗಿಯಾಗಿ ಬಿಡುಗಡೆಗೊಳಿಸುವ ವರ್ಚುವಲ್ ಕರೆನ್ಸಿಗಳು ಹಣದ ಮೇಲೆ ಸರಕಾರದ ನಿಯಂತ್ರಣವನ್ನು ತಪ್ಪಿಸಬಹುದಾದ ಅಪಾಯ ಇದೆ.
ಅಮೆರಿಕದ ಫೆಡರಲ್ ರಿಸರ್ವ್ ಕಳೆದ ವಾರ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಸಿಬಿಡಿಸಿಯ ಬುನಾದಿಯು ಕ್ರಿಪ್ಟೊಗ್ರಾಫಿಕ್ ಮತ್ತು ವಿತರಣೆ ಜಾಲದ ಲೆಡ್ಜರ್ (ಬ್ಕಾಕ್ ಚೈನ್ ) ತಂತ್ರಜ್ಞಾನವನ್ನು ಒಳಗೊಂಡಿದ್ದುಘಿ, ಕ್ರಿಪ್ಟೊಗಳಲ್ಲೂ ಇದು ಬಳಕೆಯಾಗುತ್ತದೆ. ಆದರೆ ತಂತ್ರಜ್ಞಾನ ಹೊರತುಪಡಿಸಿ ಬೇರೆ ಸಾಮ್ಯತೆಗಳಿಲ್ಲಘಿ ಎನ್ನುತ್ತಾರೆ ಕಾನೂನು ತಜ್ಞರು. ‘‘ಜನತೆ ವರ್ಗಾವಣೆ ವ್ಯವಹಾರಕ್ಕೆ ಕ್ರಿಪ್ಟೊ ಬಳಸುತ್ತಿಲ್ಲಘಿ. ಅದನ್ನು ಹೂಡಿಕೆಯ ಸಾಧನವಾಗಿ ಬಳಸುತ್ತಿದ್ದಾರೆ. ಏಕೆಂದರೆ ಇದರಿಂದ ಹೆಚ್ಚು ಆದಾಯ ಗಳಿಸಬಹುದು. ಅದರ ಮೌಲ್ಯ ವೃದ್ಧಿಸಬಹುದು ಎಂದು ಭಾವಿಸಿದ್ದಾರೆ’’ ಎನ್ನುತ್ತಾರೆ ಜೆ ಸಾಗರ್ ಅಸೋಸಿಯೇಟ್ಸ್‌ನ ಪಾಲುದಾರ ಮಾನ್ವಿಂದರ್ ಸಿಂಗ್. ಸಿಬಿಡಿಸಿ ಪಾವತಿಯ ಸಾಧನವಾಗಬಹುದು.
ಕ್ರಿಪ್ಟೊ ಮಾದರಿಯ ಆಸ್ತಿಯಾಗಲಾರದು ಎನ್ನುತ್ತಾರೆ ಅವರು.
ಬ್ಯಾಂಕ್ ಫಾರ್ ಇಂಟರ್‌ನ್ಯಶನಲ್ ಸೆಟ್ಲ್‌ಮೆಂಟ್ಸ್ (ಬಿಐಎಸ್) ಪ್ರಕಾರ, ವಿಶ್ವದ ಶೇ. ೮೬ರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ಸಿಬಿಡಿಸಿಗಳ ಬಗ್ಗೆ ಸಂಶೋಧನೆ ನಡೆಸುತ್ತವೆ.
ಹೀಗಿದ್ದರೂ, ಸಿಬಿಡಿಸಿಗಳು ಬ್ಯಾಂಕ್‌ಗಳ ಯಥಾಸ್ಥಿತಿಯನ್ನು ಕದಡಿಸಬಲ್ಲುವು. ಐಬಿಎಂನ ಸಹಾಯಕ ಪಾಲುದಾರ ಮಹೇಶ್ ನಾಯರ್ ಪ್ರಕಾರ, ‘‘ಸೆಂಟ್ರಲ್ ಬ್ಯಾಂಕ್ ವಾಣಿಜ್ಯ
ಬ್ಯಾಂಕ್‌ಗಳ ಬದಲಿಗೆ ತಾನು ಸೃಷ್ಟಿಸಿದ ಸಿಬಿಡಿಸಿ ವ್ಯಾಲೆಟ್‌ಗಳ ಬಳಕೆಗೆ ಅವಕಾಶ ನೀಡಬಹುದು. ನಂತರ ನೋಟಿನ ಪಾಲಕನಾಗಿ ಅದರ ಪಾತ್ರ ಕ್ರಮೇಣ ಕಡಿಮೆಯಾಗಬಹುದು’’
ಸಿಬಿಡಿಸಿಯಿಂದ ಬ್ಯಾಂಕ್‌ಗಳಿಗೆ ಕ್ರೆಡಿಟ್ ಸೃಷ್ಟಿಸುವ ಸಾಮರ್ಥ್ಯದ ಮೇಲೆಯೂ ವ್ಯತ್ಯಯವಾಗಬಹುದು. ಸಿಬಿಡಿಸಿಯ ವಿನ್ಯಾಸ ಮತ್ತು ಜಾರಿ ಮಹತ್ವದ್ದುಘಿ. ಅದರಿಂದ ಸಿಬಿಡಿಸಿಗೆ ಬೇಡಿಕೆ ಬರುವಂತಿರಬೇಕು ಎನ್ನುತ್ತಾರೆ ಅವರು.
ಕೇಂದ್ರೀಕೃತ ಲೆಡ್ಜರ್ ರೂಪಿಸಲು ಕಾನೂನು ಚೌಕಟ್ಟಿನ ಅಗತ್ಯ ಇದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳ ಪಾತ್ರಘಿ, ಸೈಬರ್ ಭದ್ರತೆ ಕುರಿತ ಕಳವಳಗಳು ಪರಿಹಾರವಾಗಬೇಕಿದೆ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ: www.TimesDecrypt.com
ಸಿಬಿಡಿಸಿಗಳಿಗೆ ಹೊಸ ಕಾನೂನಿನ ಮಾನ್ಯತೆಯ ಸಾಧ್ಯತೆ
- ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಗೆ (ಸಿಬಿಡಿಸಿ) ಸೆಂಟ್ರಲ್ ಬ್ಯಾಂಕ್‌ನಿಂದ ಕ್ರಿಪ್ಟೊ ತಂತ್ರಜ್ಞಾನವಾಗಿ ಮಾನ್ಯತೆ ಸಿಗುವ ಸಾಧ್ಯತೆ ಇದೆ.
- ಸಿಬಿಡಿಸಿಯ ಅಭಿವೃದ್ಧಿಯಲ್ಲಿ ಕ್ರಿಪ್ಟೊ ತಂತ್ರಜ್ಞಾನ ಬಳಕೆಯಾದರೂ, ಕ್ರಿಪ್ಟೊವನ್ನು ಇಂದು ಆಸ್ತಿಯಾಗಿ ಪರಿಗಣಿಸುವ ಹಾಗೂ ಸಿಬಿಡಿಸಿಯನ್ನು ಪಾವತಿಯ ಮಾದರಿಯಾಗಿ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.
- ಆರ್ ಬಿಐ ಸೇರಿದಂತೆ ಬಹುತೇಕ ಸೆಂಟ್ರಲ್ ಬ್ಯಾಂಕ್‌ಗಳು ಸಿಬಿಡಿಸಿ ಬಗ್ಗೆ ಸಂಶೋಧನೆ ನಡೆಸುತ್ತವೆ. ಹಣದ ವಿಚಾರದಲ್ಲಿ ವಿಶ್ವಾಸಾರ್ಹ ಹಾಗೂ ಎಲೆಕ್ಟ್ರಾನಿಕ್ ಸ್ವರೂಪದ ಅನುಕೂಲ ಎರಡನ್ನೂ ಹೊಂದುವಂತೆ ಸಹಕಾರಿಯಾಗಬಹುದು.
- ಸಿಬಿಡಿಸಿಯು ಹಣದ ಮುದ್ರಣ ಮತ್ತು ಸಾಗಣೆಯ ವೆಚ್ಚವನ್ನು ಗಣನೀಯ ಇಳಿಸಲು ಸಹಕಾರಿ. ಸಿಬಿಡಿಸಿಯನ್ನು ನೇರವಾಗಿ ವರ್ಗಾಯಿಸುವುದರಿಂದ ಅಂತರ ಬ್ಯಾಂಕ್ ಸೆಟ್ಲ್‌ಮೆಂಟ್ ಅವಲಂಬನೆ ತಗ್ಗುತ್ತದೆ.
- ಸೈಬರ್ ಭದ್ರತೆ, ಬ್ಯಾಂಕ್‌ಗಳ ಪಾತ್ರದ ಬಗ್ಗೆ ನೀತಿ ನಿರೂಪಕರು ಗಮನ ಹರಿಸಬೇಕಾಗಿದೆ.
- ಚೀನಾ ಮತ್ತು ಸ್ವೀಡನ್ ಮತ್ತು ಕೆಲ ದೇಶಗಳು ಸಿಬಿಡಿಸಿಯ ಪ್ರಾಯೋಗಿಕ ಯೋಜನೆಗಳನ್ನು ಹೊಂದಿವೆ. ಅಮೆರಿಕ, ಬ್ರಿಟನ್ ಮತ್ತು ಭಾರತ ಇದರ ಸಾಧಕ ಮತ್ತು ಬಾಧಕಗಳನ್ನು ಪರಿಶೀಲಿಸುತ್ತಿವೆ.