• Home
  • Webinars
  • Resources
  • Projects
  • Ask the Expert
  • FAQs
  • Contact
  • About
Times Decrypt
  • Home
  • Webinars
  • Resources
  • Projects
  • Ask the Expert
  • FAQs
  • Contact
  • About

ಕ್ರಿಪ್ಟೊ ಬಗ್ಗೆ ಬಹುತೇಕ ರಾಷ್ಟ್ರಗಳಿಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇಕೆ

Times of India
Written by

Times of India, Editorial

Published: Feb 28, 2022 11:59 PM

ಕ್ರಿಪ್ಟೊ ಕರೆನ್ಸಿಗಳ ವರ್ಗೀಕರಣದಲ್ಲೊಂದು ಗೊಂದಲವಿದೆ. ಇದನ್ನು ಆಸ್ತಿಘಿ, ಪ್ರಾಪರ್ಟಿ ಅಥವಾ ಸರಕು ಎಂದು ಪರಿಗಣಿಸುವುದೇ? ಎಂಬುದು. ಜಗತ್ತಿನಾದ್ಯಂತ ನಿಯಂತ್ರಕ ವ್ಯವಸ್ಥೆಗಳು ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ನಾನಾ ವಿಧದ ವ್ಯಾಖ್ಯಾನಗಳನ್ನು ಹೊಂದಿವೆ. ಆದರೆ ಒಮ್ಮತ ಕಂಡು ಬರುತ್ತಿಲ್ಲಘಿ. ಪ್ರಮುಖ  ಆರ್ಥಿಕತೆಗಳಲ್ಲಿ ಕೂಡ ವಿಕೇಂದ್ರೀಕೃತ ವರ್ಚುವಲ್ ಕರೆನ್ಸಿಗಳನ್ನು ಹೇಗೆ ಪರಿಗಣಿಸಬೇಕು, ಯಾವುದು ಆರ್ಥಿಕ ಸ್ಥಿರತೆಗೆ ಅಪಾಯ ಒಡ್ಡಬಲ್ಲುದು ಮತ್ತು ಗಡಿಯಾಚೆಗಿನ ವರ್ಗಾವಣೆಗಳ ಮೇಲೆ ಪ್ರಭಾವ ಬೀರಬಲ್ಲುದು ಎಂಬುದರ ಬಗ್ಗೆ ಒಮ್ಮತವಿಲ್ಲಘಿ.

ನೀತಿ ನಿರೂಪಕರು ಮತ್ತು ಕಾನೂನು ತಜ್ಞರು ಹೇಳುವ ಪ್ರಕಾರ, ಬಹುತೇಕ ರಾಷ್ಟ್ರಗಳಿಗೆ ವರ್ಚುವಲ್ ಕರೆನ್ಸಿಗಳ ಬಗ್ಗೆ ಒಂದು ಸ್ಪಷ್ಟವಾದ ನೀತಿಯನ್ನು ರಚಿಸಲು ಸಾಧ್ಯವಾಗಿಲ್ಲಘಿ.  ಏಕೆಂದರೆ ಅಲ್ಲಿ ಈ ಹಿಂದೆ ನಿಷೇಧ ಹೊರತುಪಡಿಸಿ, ಯಾವುದೇ ನೀತಿಯ ಪೂರ್ವ ನಿದರ್ಶನಗಳಿಲ್ಲಘಿ. ಅದು ಕೂಡ ಪರಿಣಾಮಕಾರಿಯಾಗಿಲ್ಲಘಿ. ಹೆಚ್ಚುತ್ತಿರುವ ಕ್ರಿಪ್ಟೊಕರೆನ್ಸಿಗಳ ಜನಪ್ರಿಯತೆಯು ಹಣಕಾಸು ನೀತಿ, ಬಂಡವಾಳ ಹರಿವಿನ ಮೇಲೆ ಸರಕಾರದ ನಿಗಾವನ್ನು ದುರ್ಬಲಗೊಳಿಸಬಹುದು ಎಂಬ ಕಾರಣಕ್ಕೆ ನೀತಿ ನಿರೂಪಕರ ಗಮನವನ್ನು ಸೆಳೆದಿದೆ. ಮತ್ತು ಇದರ ಮೂಲಕ ಅಕ್ರಮ ಚಟುವಟಿಕೆ ನಡೆದರೆ ನಿಗಾ ವಹಿಸುವುದು ಕಷ್ಟವಾದೀತು ಎಂಬ ಕಾರಣಕ್ಕೂ ಗಮನಸೆಳೆದಿದೆ.

ಕೇವಲ ಎಲ್ ಸಾಲ್ವಡೇರ್ ಎಂಬ ಏಕೈಕ ರಾಷ್ಟ್ರ ಬಿಟ್ ಕಾಯಿನ್‌ಗೆ ಕಾನೂನು ಮಾನ್ಯತೆ ನೀಡಿದೆ.  ಚೀನಾ ಸೇರಿದಂತೆ ೯ ದೇಶಗಳು ಕ್ರಿಪ್ಟೊಗಳನ್ನು ಸಂಪೂರ್ಣವಾಗಿ ನಿಷೇಸಿವೆ. ಬಾಂಗ್ಲಾದೇಶ ದಂತಹ ೪೨ ದೇಶಗಳು ಭಾಗಶಃ ನಿಷೇಸಿವೆ. ಅಂದರೆ ಬ್ಯಾಂಕ್‌ಗಳು ನೇರ ಅಥವಾ ಪರೋಕ್ಷವಾಗಿ ಕ್ರಿಪ್ಟೊ ವಿನಿಮಯ ಕೇಂದ್ರಗಳ ಜತೆಗೆ ವ್ಯವಹರಿಸದಂತೆ ನಿರ್ಬಂಸಿವೆ ಎಂದು ಲಾ ಲೈಬ್ರೆರಿ ಆಫ್ ಕಾಂಗ್ರೆಸ್ (ಅಮೆರಿಕ) ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಕಟಿಸಿದ ವರದಿ ತಿಳಿಸಿದೆ.

‘‘ ಮುಖ್ಯವಾಗಿ ಕ್ರಿಪ್ಟೊ ಗಳನ್ನು ‘ಆಸ್ತಿ’ ಎಂದು ಪರಿಗಣಿಸಬೇಕೆ ಅಥವಾ ‘ಕರೆನ್ಸಿ’ ಎಂದು ಪರಿಗಣಿಸಬೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲಘಿವಾದ್ದರಿಂದ ನಿಯಂತ್ರಕ ವ್ಯವಸ್ಥೆಗಳಲ್ಲಿ 

ಒಮ್ಮತ ಮೂಡಿಲ್ಲಘಿ. ಬಹುತೇಕ ಮಂದಿ ಇದನ್ನು ಊಹಾತ್ಮಕ ಹೂಡಿಕೆಯ ಸಾಧನವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’’ ಎನ್ನುತ್ತಾರೆ ಲ್ಯುಮೀರ್ ಲಾ ಪಾರ್ಟ್‌ನರ್ಸ್‌ ಸಂಸ್ಥೆ ವ್ಯವಸ್ಥಾಪಕ ಪಾಲುದಾರರಾದ ಪ್ರಬಲ್ ಭಾಧುರಿ. ಕ್ರಿಪ್ಟೊಗಳ ತಾಂತ್ರಿಕ ಸ್ವರೂಪಗಳ ಬಗ್ಗೆಯೂ ಕಾನೂನು ನಿರೂಪಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಕ್ರಿಪ್ಟೊವನ್ನು ಸರಕು ಎಂದು ವರ್ಗೀಕರಿಸುವುದರಿಂದ ಮಾರುಕಟ್ಟೆ ಮತ್ತು ಪ್ರಕ್ರಿಯೆಗಳಿಗೆ ಸಂಬಂಸಿದ ಅಪಾಯಗಳನ್ನು ನಿರ್ವಹಿಸಬಹುದು. ಆದರೆ ಅಕ್ರಮ ಚಟುವಟಿಕೆಗಳನ್ನಲ್ಲಘಿ. ಹಣಕಾಸು ಸ್ಥಿರತೆ, ವ್ಯವಸ್ಥಿತ ಮತ್ತು ಬಂಡವಾಳ ಹೊರ ಹರಿವಿನ ಅಪಾಯಗಳನ್ನಲ್ಲ’’ ಎನ್ನುತ್ತದೆ ಬ್ಲಾಕ್ ಚೈನ್ ತಜ್ಞರಾದ ತನ್ವಿರತ್ನ ಅವರು ಸ್ಥಾಪಿಸಿದ ತಜ್ಞರ ಪಡೆ ರಚಿಸಿದ ನೀತಿ ೪.೦ ವರದಿ.

ಅಮೆರಿಕದಲ್ಲಿ ಕೆಲವು ರಾಜ್ಯಗಳು ಕ್ರಿಪ್ಟೊ ಪರ ಒಲವು ವ್ಯಕ್ತಪಡಿಸಿವೆ. ಆದರೆ ಫೆಡರಲ್ ನೀತಿ ಅಲ್ಲಿಲ್ಲಘಿ.  ತೆರಿಗೆಗೆ ಸಂಬಂಸಿ ೨೦೧೪ರಿಂದ ‘ಪ್ರಾಪರ್ಟಿ’ ಎಂದು ಪರಿಗಣನೆಯಾಗಿದೆ. ಡಿರೈವಟೀಸ್ ನಿಯಂತ್ರಕ ಸಿಎಫ್‌ಟಿಸಿಯು ‘ಸರಕು’ ಎಂದು ಪರಿಗಣಿಸಿದೆ.  ಮಾರುಕಟ್ಟೆ ನಿಯಂತ್ರಕ ಎಸ್‌ಇಸಿ, ಕ್ರಿಪ್ಟೊಗಳ ಬಗ್ಗೆ ಯಾವುದೇ ವ್ಯಾಖ್ಯಾನ ಹೊಂದಿಲ್ಲಘಿ.

ಭಾರತ ಸರಕಾರ ಇಲ್ಲಿಯವರೆಗೆ ತನ್ನ ದೃಢವಾದ ನಿಲುವನ್ನು ವ್ಯಕ್ತಪಡಿಸಿಲ್ಲಘಿ. ಕ್ರಿಪ್ಟೊ ಕುರಿತಂತೆ ಎಲ್ಲ ವಿಭಾಗಗಳಲ್ಲಿ ಸಮನ್ವಯತೆ ಉಂಟಾಗಿಲ್ಲಘಿ. ಹೀಗಾಗಿ ಉದ್ದೇಶಿತ ವಿಧೇಯಕದ ಮಂಡನೆಯನ್ನು ಕನಿಷ್ಠ ಮುಂದಿನ ಸಂಸತ್ ಅವೇಶನದ ತನಕ ಮುಂದೂಡಲಾಗಿದೆ. ಆರ್‌ಬಿಐ ಕ್ರಿಪ್ಟೊಗಳ ಸಂಪೂರ್ಣ ನಿಷೇಧಕ್ಕೆ ಕರೆ ನೀಡಿತ್ತುಘಿ. ಭಾಗಶಃ ನಿಷೇಧ ಪ್ರಯೋಜನಕಾರಿಯಲ್ಲ ಎಂದಿದೆ. ಸರಕಾರ ಸ್ಪಷ್ಟ ನೀತಿಯನ್ನು ಜಾರಿಗೊಳಿಸದ ಹೊರತು ಮ್ಯೂಚುವಲ್ ಫಂಡ್ ಕಂಪನಿಗಳು ಕ್ರಿಪ್ಟೊಗಳಲ್ಲಿ ಹೂಡಿಕೆ ಮಾಡುವಂತಿಲ್ಲ ಎಂದು ಸೆಬಿ ಮುಖ್ಯಸ್ಥ ಅಜಯ ತ್ಯಾಗಿ ತಿಳಿಸಿದ್ದಾರೆ. ನೀತಿ ೪.೦ ವರದಿಯು ‘‘ತಂತ್ರಜ್ಞಾನಕ್ಕೆ ಸಂಬಂಸಿ ಕಾನೂನು ರಚನೆ ಮತ್ತು ಪೂರ್ಣ ಪ್ರಮಾಣದ ಕಾನೂನು ಪ್ರಕ್ರಿಯೆಗಳನ್ನು ನಿರೀಕ್ಷಿಸುವುದು ಸಮಂಜಸವಾಗದು. ಏಕೆಂದರೆ ಇಂಥ ನಿಯಂತ್ರಣಗಳನ್ನು ಸುಲಭವಾಗಿ ಬೈಪಾಸ್ ಮಾಡಬಹುದು’’ ಎಂದು ಹೇಳಿದೆ. ಉದಾಹರಣೆಗೆ ಚೀನಾ ಮತ್ತು ದಕ್ಷಿಣ ಕೊರಿಯಾಗಳನ್ನು ವರದಿಯು ಉದಾಹರಿಸಿದ್ದುಘಿ, ಅಲ್ಲಿ ನಿಷೇಧವು ಸಂಪೂರ್ಣವಾಗಿ ಪರಿಣಾಮಕಾರಿಯಾಗಿಲ್ಲ ಎಂದಿದೆ.

‘‘ ಕ್ರಿಪ್ಟೊಗಳ ಮೇಲೆ ಸಂಪೂರ್ಣ ನಿಷೇಧ ಕಷ್ಟಕರ ಮತ್ತು ಪ್ರಾಯೋಗಿಕವಲ್ಲಘಿ. ಆದ್ದರಿಂದ ರಾಷ್ಟ್ರಗಳು ಕ್ರಿಪ್ಟೊಗಳಿಗೆ ಪ್ರಬಲ ನಿಯಂತ್ರಕ ಚೌಕಟ್ಟು ಅಳವಡಿಸುವುದು ಮತ್ತು ಹೂಡಿಕೆದಾರರಿಗೆ ಅದರಲ್ಲಿನ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಸೂಕ್ತ’’ ಎಂದು ಲ್ಯುಮೀರ್ ಲಾ ಪಾರ್ಟ್‌ನರ್ಸ್‌ ಸಂಸ್ಥೆ ಯ ಪ್ರಧಾನ ಅಸೋಸಿಯೇಟ್ಸ್ ಆದ ನಿತಿನ್ ಶರ್ಮಾ ತಿಳಿಸಿದ್ದಾರೆ. ಅವರ ಪ್ರಕಾರ ಕ್ರಿಪ್ಟೊಗಳಿಗೆ ಸಂಬಂಸಿದಂತೆ ನಿಗಾ ವಹಿಸಬೇಕಿರುವ ವಿಚಾರಗಳಲ್ಲಿ, ಹೂಡಿಕೆದಾರರ ಅಲ್ಪ ಪ್ರಬುದ್ಧತೆ, ವಂಚನೆಯ ಸಾಧ್ಗಯತೆಗಳು, ಭಯೋತ್ಪಾದನೆಗೆ ಹಣಕಾಸು ಪೂರೈಕೆ, ಅಕ್ರಮ ಹಣಕಾಸು  ವರ್ಗಾವಣೆ ಸೇರಿವೆ.

ಐಎಂಎಫ್ ಮತ್ತು ಡಬ್ಲ್ಯುಇಎಫ್‌ನಂಥ ಸಂಸ್ಥೆಗಳ ಪ್ರಕಾರ, ಕ್ರಿಪ್ಟೊಗಳು ಗಡಿಯಾಚೆಗಿನ ಪಾವತಿಗಳಿಗೆ ಸಹಕರಿಸಲಿದೆ. ಅವುಗಳ ದಕ್ಷತೆ ಹೆಚ್ಚಿಸಬಹುದು. ಹಣಕಾಸು ಸೇರ್ಪಡೆಯನ್ನು ಸುಧಾರಿಸಬಹುದು. ಅದರ ನಿರ್ವಹಣೆಗೆ ಸಂಬಂಸಿ ಕಳವಳ ಇದೆ ಎಂದರೆ ನಿಯಂತ್ರಣ ವ್ಯವಸ್ಥೆಗೆ ಜಾಗತಿಕ ಕಾರ್ಯಸೂಚಿಯ ಅಗತ್ಯ ಇದೆ ಎಂದರ್ಥ ಎಂದಿವೆ.

ಕ್ರಿಪ್ಟೊ ಕುರಿತ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ: www.TimesDecrypt.com

ಆಸ್ತಿ, ಪ್ರಾಪರ್ಟಿ ಅಥವಾ ಸರಕು?

ಅಮೆರಿಕ: ಫೆಡರಲ್ ನಿಯಂತ್ರಕದ ಚೌಕಟ್ಟು ಇಲ್ಲಘಿ. ಸಿಎಫ್‌ಟಿಸಿ ಸರಕು ಎಂದಿದೆ. ತೆರಿಗೆ ವಿಚಾರದಲ್ಲಿ ಪ್ರಾಪರ್ಟಿ ಎಂದು ಪರಿಗಣಿಸಲಾಗಿದೆ.

ಯುಕೆ, ಆಸ್ಟ್ರೇಲಿಯಾ: ಕ್ರಿಪ್ಟೊಗಳನ್ನು  ಹೊಂದಬಹುದು. ಆದರೆ ಅವುಗಳಿಗೆ ಕಾನೂನು ಮಾನ್ಯತೆ ಇಲ್ಲಘಿ. ತೆರಿಗೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳು ಅನ್ವಯ.

ಸಿಂಗಾಪುರ: ೨೦೨೦ರಿಂದ ನಿಯಂತ್ರಕ ವ್ಯವಸ್ಥೆ ಇದೆ. ಕ್ರಿಪ್ಟೊವನ್ನು ಆಸ್ತಿ ಎಂದು ವರ್ಗೀಕರಿಸಲಾಗಿದೆ. ದೀರ್ಘಾವ ಹೂಡಿಕೆಗೆ ಸೂಕ್ತ ಎನ್ನಲಾಗುತ್ತಿದೆ. ತೆರಿಗೆ ಇಲ್ಲಘಿ.

ಚೀನಾ: ಕ್ರಿಪ್ಟೊ ವ್ಯವಹಾರಕ್ಕೆ ನಿಷೇಧ ಇದೆ. ಕ್ರಿಪ್ಟೊ ವಿನಿಮಯ ಕೇಂದ್ರಘಿ, ಗಣಿಗಾರಿಕೆಗೆ ನಿಷೇಧ ಇದೆ.

ಭಾರತ: ಆರ್‌ಬಿಐ ಇದನ್ನು ಪೂರ್ಣವಾಗಿ ನಿಷೇಸಬೇಕು ಎಂದಿದೆ. ಸರಕಾರದ ಎಲ್ಲ ವಿಭಾಗಗಳಲ್ಲಿ ಒಂದೇ ಅಭಿಮತ ಮುಡಿಲ್ಲಘಿ. ವಿಧೇಯಕ ಮಂಡನೆ ಮುಂದೂಡಲಾಗಿದೆ.

ಐರೋಪ್ಯ ಒಕ್ಕೂಟ: ಸಮಗ್ರ ನಿಯಂತ್ರಕ ಚೌಕಟ್ಟು  ಅಭಿವೃದ್ಧಿಯ ಹಂತದಲ್ಲಿದೆ.

ದಕ್ಷಿಣ ಕೊರಿಯಾ:  ಕಾನೂನು ಮಾನ್ಯತೆ ಇಲ್ಲದಿದ್ದರೂ, ಇತರ ಬಳಕೆಗೆ ಕಠಿಣ ನಿಯಂತ್ರಕ ವ್ಯವಸ್ಥೆ ಇದೆ.

ಮೂಲ: ಇನ್ವೆಸ್ಟೊಪೀಡಿಯಾ, ಲೈಬ್ರೆರಿ ಆಫ್ ಕಾಂಗ್ರೆಸ್.

#kannada

Share the article on:

  • Facebook
  • Twitter
  • LinkedIn
  • WhatsApp

Related articles

  • ಭಾರತದಲ್ಲಿ ಕ್ರಿಪ್ಟೊ ವಹಿವಾಟು ಕಾನೂನು ಬಾಹಿರವಲ್ಲ
  • ಕ್ರಿಪ್ಟೊ ಸಂಪೂರ್ಣ ನಿಷೇಧಕ್ಕೆ ಆರ್‌ಬಿಐ ಒಲವು, ತಜ್ಞರ ಆಕ್ಷೇಪ
  • ತೆರಿಗೆ ಮತ್ತು ವಿಧಾನ: ಕ್ರಿಪ್ಟೊ ಹೂಡಿಕೆದಾರರಿಗೆ ಬಜೆಟ್ ಹೇಗೆ ಮಿಶ್ರ ಫಲ
  • ಅಪಾಯದ ಹೊರತಾಗಿಯೂ ಯುವ ಹೂಡಿಕೆದಾರರನ್ನು ಸೆಳೆಯುತ್ತಿರುವ ಕ್ರಿಪ್ಟೋ ಟೆಕ್ ಬ್ಲಾಕ್‌ಚೈನ್
  • ಸೆಂಟ್ರಲ್ ಬ್ಯಾಂಕ್‌ಗಳು ತಮ್ಮ ಡಿಜಿಟಲ್ ಕರೆನ್ಸಿಗೆ ಅನ್ವೇಷಿಸುತ್ತಿದ್ದರೂ, ಕ್ರಿಪ್ಟೊಗೆ ವಿರೋಧವೇಕೆ?

Top categories

  • Crypto NEWS
  • Cryptocurrency
  • Blockchain
  • Economic
  • Legal

Read in your language

  • Bengali
  • Gujarati
  • Hindi
  • Kannada
  • Marathi

Stay up to date

Subscribe to our newsletter

Resources

  • Blockchain
  • Cryptocurrency
  • Legal
  • Crypto NEWS
  • Featured Videos

Important links

  • Ask an Expert
  • Webinars
  • About
  • Resources
  • Contact

Follow us

Catch the exclusive Times Decrypt coverage in TOI newspaper every Wednesday.

To start the doorstep delivery of your copy of TOI, visit subscribe.timesgroup.com

© Times Decrypt - All rights reserved. Powered by Leo Digital