• Home
  • Webinars
  • Resources
  • Projects
  • Ask the Expert
  • FAQs
  • Contact
  • About
Times Decrypt
  • Home
  • Webinars
  • Resources
  • Projects
  • Ask the Expert
  • FAQs
  • Contact
  • About

ಭಾರತದಲ್ಲಿ ಕ್ರಿಪ್ಟೊ ವಹಿವಾಟು ಕಾನೂನು ಬಾಹಿರವಲ್ಲ

Times of India
Written by

Times of India, Editorial

Published: Feb 28, 2022 11:48 PM

ಡಿಜಿಟಲ್ ಆಸ್ತಿಯಾದ ಕ್ರಿಪ್ಟೊಗಳನ್ನು ಸರಕಾರವು ಡಿಜಿಟಲ್ ಕರೆನ್ಸಿಯಾಗಿ ಪರಿಗಣಿಸಿಲ್ಲಘಿ. ಹೀಗಿದ್ದರೂ, ಅದರ ಖರೀದಿ ಮತ್ತು ಮಾರಾಟ ವಹಿವಾಟುಗಳನ್ನು ನಿಷೇಸಿಲ್ಲಘಿ. 

ಹಾಗಾದರೆ ಸರಕಾರ ಇದನ್ನು ಹೇಗೆ ಪರಿಗಣಿಸಿದೆ ? ವಿವರ ಇಲ್ಲಿದೆ.


ಭಾರತದಲ್ಲಿ ಕ್ರಿಪ್ಟೊ ಬಳಕೆ ಮತ್ತು ಅದರ ವಹಿವಾಟು ಕಾನೂನುಬಾಹಿರವಲ್ಲಘಿ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಕ್ರಿಪ್ಟೊಗಳ ಕೊಡು-ಕೊಳ್ಳುವಿಕೆಗಳು ಅಕ್ರಮ ಎಂದು ಸರಕಾರ ಪರಿಗಣಿಸಿಲ್ಲಘಿ. ಕುದುರೆ ರೇಸ್, ಬೆಟ್ಟಿಂಗ್‌ನಲ್ಲಿ ದೊರೆಯುವ ಆದಾಯದಂತೆ ಕ್ರಿಪ್ಟೊ ವಹಿವಾಟುಗಳಿಂದ 

ಬರುವ ಆದಾಯವನ್ನು ಪರಿಗಣಿಸಿ ತೆರಿಗೆಯ ಚೌಕಟ್ಟಿಗೆ ಒಳಪಡಿಸಲಾಗುವುದು ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್ ಅವರು ವಿವರಿಸಿದ್ದಾರೆ.

ಇದರೊಂದಿಗೆ ಕ್ರಿಪ್ಟೊ ಗಳಿಗೆ ಸಂಬಂಸಿದಂತೆ ಹಲವಾರು ಊಹಾಪೋಹಗಳಿಗೆ ತೆರೆ ಬಿದ್ದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಫೆ.೧ರಂದು ಮಂಡಿಸಿರುವ ೨೦೨೨-೨೩ ಸಾಲಿನ ಆಯವ್ಯಯದಲ್ಲಿ, ಕ್ರಿಪ್ಟೊ ಮಾದರಿಯ ವರ್ಚುವಲ್ ಆಸ್ತಿಗಳಿಗೆ ತೆರಿಗೆ ವಿಸುವ ಪ್ರಸ್ತಾಪವನ್ನು ತಿಳಿಸಿದ್ದಾರೆ.

ಬಜೆಟ್ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ರೂಪಾಯಿಯನ್ನು ೨೦೨೨-೨೩ರಲ್ಲಿ ಬಿಡುಗಡೆಗೊಳಿಸಲಿದೆ. ಜತೆಗೆ ಕ್ರಿಪ್ಟೊ ಮತ್ತು ಇತರ ಯಾವುದೇ ರೂಪದ ವರ್ಚುವಲ್ ಆಸ್ತಿಗಳಿಗೆ ತೆರಿಗೆ ಅನ್ವಯಿಸಲಿದೆ.

ನಗದು ಬಳಕೆಯನ್ನು ತಗ್ಗಿಸಲು ಹಾಗೂ ಡಿಜಿಟಲ್ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ದಕ್ಷತೆಯ ಮತ್ತು ಅಗ್ಗದ ವೆಚ್ಚದ ಕರೆನ್ಸಿಯಾಗಲಿದೆ. ನೋಟುಗಳ ಮುದ್ರಣ ವೆಚ್ಚ ತಗ್ಗಲಿದೆ. ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನೂ ಇದಕ್ಕಾಗಿ ಬಳಸಿಕೊಳ್ಳಲಾಗುವುದು.

ಕ್ರಿಪ್ಟೊ ಮೇಲೆ ಶೇ.೩೦ ತೆರಿಗೆ

ಸರಕಾರ ಯಾವುದೇ ಬಗೆಯ ವರ್ಚುವಲ್ ಡಿಜಿಟಲ್ ಆಸ್ತಿಗಳ ವರ್ಗಾವಣೆಗಳಲ್ಲಿ ಗಳಿಸುವ ಆದಾಯದ ಮೇಲೆ ಶೇ.೩೦ ತೆರಿಗೆ ವಿಸಲು ನಿರ್ಧರಿಸಿದೆ. ಇದರೊಂದಿಗೆ ಮೊದಲ ಬಾರಿಗೆ ಕ್ರಿಪ್ಟೊ ಇತ್ಯಾದಿ ಡಿಜಿಟಲ್ ಆಸ್ತಿಗಳ ವ್ಯವಹಾರಕ್ಕೆ ತೆರಿಗೆ ಅನ್ವಯಿಸಲಿದೆ. ವರ್ಚುವಲ್ ಆಸ್ತಿಗಳ ಖರೀದಿ ವೆಚ್ಚ ಹೊರತುಪಡಿಸಿ ಉಳಿದ ಯಾವುದೇ ವೆಚ್ಚಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲಘಿ. ವರ್ಚುವಲ್ ಆಸ್ತಿಯ ವರ್ಗಾವಣೆ ವೇಳೆ, ನಿರ್ದಿಷ್ಟ  ಮಿತಿಯ ನಂತರ ಶೇ.೧ ಟಿಡಿಎಸ್ 

ಅನ್ನೂ ಪಾವತಿಸಬೇಕಾಗುತ್ತದೆ. ಇವುಗಳನ್ನು ಕೊಡುಗೆಯಾಗಿ ನೀಡಿದರೂ, ಸ್ವೀಕರಿಸುವ ವ್ಯಕ್ತಿ ತೆರಿಗೆ ಪಾವತಿಸಬೇಕಾಗುತ್ತದೆ.

ಕಳೆದ ೨೦೧೩ರಲ್ಲಿ ಕ್ರಿಸ್‌ಮಸ್‌ಗೆ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಭಾರತೀಯರಿಗೆ, ಕ್ರಿಪ್ಟೊ ಕರೆನ್ಸಿಗಳ ಹಣಕಾಸು, ಕಾನೂನು ಮತ್ತು ಭದ್ರತೆಗಳಿಗೆ ಸಂಬಂಸಿ ಎಚ್ಚರಿಕೆಯ ಟಿಪ್ಪಣಿಯನ್ನು ನೀಡಿತ್ತುಘಿ. ವಿಶ್ವದ ಮೊಟ್ಟ ಮೊದಲ ಕ್ರಿಪ್ಟೊ ಕರೆನ್ಸಿಯಾದ ಬಿಟ್ ಕಾಯಿನ್ ಬಿಡುಗಡೆಯಾದ ನಾಲ್ಕು ವರ್ಷಗಳ ನಂತರ ಆರ್‌ಬಿಐ ಈ ಎಚ್ಚರಿಕೆ ನೀಡಿತ್ತುಘಿ.

ಇದಾಗಿ ಎಂಟು ವರ್ಷಗಳ ನಂತರ ಕೂಡ ಕ್ರಿಪ್ಟೊ ವಿರುದ್ಧ ಆರ್‌ಬಿಐನ ವಿರೋಧ ಮತ್ತಷ್ಟು ಬಲವಾಗಿತ್ತುಘಿ. ಈ ಹಿಂದೆ ಆರ್‌ಬಿಐ ತನ್ನ ಮಂಡಳಿಗೆ ಕ್ರಿಪ್ಟೊ ವಿರುದ್ಧ ಸಂಪೂರ್ಣ ನಿಷೇಧ ಅಗತ್ಯ ಎಂದು ತಿಳಿಸಿತ್ತುಘಿ. ಭಾಗಶಃ ನಿರ್ಬಂಧಗಳು ಪರಿಣಾಮಕಾರಿಯಾಗದು ಎಂದಿತ್ತುಘಿ. ಆರ್‌ಬಿಐ ೨೦೧೮ರಲ್ಲಿ ಭಾರತದಲ್ಲಿ ಕ್ರಿಪ್ಟೊ ವಹಿವಾಟನ್ನು ನಿಷೇಸಿತ್ತುಘಿ. ಕ್ರಿಪ್ಟೊಗಳನ್ನು ಮಾನ್ಯ ಮಾಡದಂತೆ ಬ್ಯಾಂಕ್‌ಗಳಿಗೆ ಆದೇಶಿಸಿತ್ತುಘಿ. ಹೀಗಿದ್ದರೂ 

ಸುಪ್ರೀಂ ಕೋರ್ಟ್ ೨೦೨೦ರಲ್ಲಿ ಆರ್‌ಬಿಐ ಆದೇಶವನ್ನು ಬದಿಗೊತ್ತಿತ್ತುಘಿ.

ಕ್ರಿಪ್ಟೊಗಳಿಂದ ಹಣಕಾಸು ಸ್ಥಿರತೆಗೆ ಧಕ್ಕೆಯಾಗಬಹುದು ಎಂದು ಆರ್‌ಬಿಐ ನಿರಂತರವಾಗಿ ಕಳವಳ ವ್ಯಕ್ತಪಡಿಸಿತ್ತುಘಿ. ಕ್ರಿಪ್ಟೊಗಳ ಬಳಕೆಗೆ ಮುಕ್ತವಾಗಿ ಅವಕಾಶ ಸೃಷ್ಟಿಸಿದರೆ ಆರ್‌ಬಿಐ ಹಣಕಾಸು ನೀತಿಯ ಪರಿಣಾಮಗಳು ಸಡಿಲವಾಗಬಹುದು. ವರ್ಚುವಲ್ ಕರೆನ್ಸಿಗಳು ಬ್ಯಾಂಕ್‌ಗಳು ಮತ್ತು ಇತರ ನಿಯಂತ್ರಿತ ಸಂಸ್ಥೆಗಳನ್ನೂ ದುರ್ಬಲಗೊಳಿಸಬಲ್ಲುದು. ಕ್ರಿಪ್ಟೊಗಳ ದರಗಳಲ್ಲಿನ ತೀವ್ರ ಏರಿಳಿತಗಳು ಮತ್ತು ವರ್ಗಾವಣೆಗಳನ್ನು ಪತ್ತೆಹಚ್ಚುವಲ್ಲಿನ ಸವಾಲುಗಳು ಕೂಡ ಕಳವಳಕಾರಿಯಾಗಿವೆ ಎಂಬುದು ಆರ್‌ಬಿಐ ಅಭಿಮತವಾಗಿತ್ತುಘಿ.

ಹಣಕಾಸು ತಂತ್ರಜ್ಞಾನ ವಲಯದ ಸಂಸ್ಥೆ ಯೊಂದರ ಪ್ರಕಾರ, ಸರಕಾರದಲ್ಲಿ ಒಂದು ವರ್ಗವು ಕ್ರಿಪ್ಟೊಗಳ ಸಂಪೂರ್ಣ ನಿಷೇಧಕ್ಕೆ ವಿರೋಸುತ್ತಿರಬಹುದು. ಜಾಗತಿಕವಾಗಿ ಸಂಪರ್ಕಗಳ ಕಡಿತವಾಗುವ ಭೀತಿಯೂ ಇರಬಹುದು. ಚೀನಾ ಈ ವರ್ಷ ಕ್ರಿಪ್ಟೊವನ್ನು ನಿಷೇಸಿತ್ತುಘಿ. ಅದೇ ಕ್ಲಬ್‌ಗೆ ಭಾರತ ಸೇರಬಹುದು ಎಂಬ ಕಳವಳ ಇರಬಹುದು. ಕಾನೂನು ತಜ್ಞರು ಹೇಳುವಂತೆ ಕ್ರಿಪ್ಟೊವನ್ನು ನಿಷೇಸಲೂ ಕಾಲ ಬಹಳ ವಿಳಂಬವಾಗಿದೆ. ಅವರ ಪ್ರಕಾರ ಸರಕಾರ ಸಮತೋಲನದ ನಿರ್ಧಾರವನ್ನು ಕೈಗೊಳ್ಳಬೇಕು. ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆಯಾಗದಂತೆಯೂ, ಇದೇ ವೇಳೆ ಯಾವುದೇ ಕ್ರಿಪ್ಟೊ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಬೆಳೆಯದಂತೆಯೂ ನೋಡಿಕೊಳ್ಳಬೇಕು. ಇದರ ಅನಿಯಂತ್ರಿತ ಬೆಳವಣಿಗೆಯಿಂದ ವಿದೇಶಿ ವಿನಿಮಯ ಸಂಗ್ರಹಕ್ಕೆ ಹಾಗೂ ಆರ್ಥಿಕತೆಗೆ ಧಕ್ಕೆಯಾಗದಂತೆಯೂ ನೋಡಿಕೊಳ್ಳಬೇಕು. 

ದೂರದೃಷ್ಟಿಯ ಬಜೆಟ್ ಕೇಂದ್ರ ಬಜೆಟ್ ಅತ್ಯಂದ ದೂರದೃಷ್ಟಿಯ ಮತ್ತು ಪ್ರೇರಣಾದಾಯಿ ಆಯವ್ಯಯವಾಗಿದೆ. ಸುಸ್ಥಿರವಾದ ಬೆಳವಣಿಗೆ, ಆಧುನಿಕ, ಪ್ರಬಲ, ಡಿಜಿಟಲ್ ಮಾದರಿಯ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ. ನಾವು ಈ ಪ್ರಗತಿಪರ ಬಜೆಟ್ ಮಂಡಿಸಿದ ಹಣಕಾಸು ಸಚಿವರನ್ನು ಅಭಿನಂದಿಸುತ್ತಿದ್ದೇವೆ.

ತೆರಿಗೆ ಪದ್ಧತಿ ಬಗ್ಗೆಘಿ: ವರ್ಚುವಲ್ ಆಸ್ತಿ ಅಥವಾ ಕ್ರಿಪ್ಟೊಗಳ ಬಗ್ಗೆ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ. ಇದು ಕ್ರಿಪ್ಟೊ ಉದ್ಯಮಕ್ಕೆ ಬೇಕಾದ ಸ್ಪಷ್ಟತೆಯನ್ನು ನೀಡುತ್ತದೆ. ಹೆಚ್ಚು ಆತ್ಮ ವಿಶ್ವಾಸವನ್ನು ನೀಡುತ್ತದೆ. ಭಾರತವು ಡಿಜಿಟಲ್ ಸಂಶೋಧನೆಗೆ ಮತ್ತು ಬ್ಲಾಕ್‌ಚೈನ್ ತ್ಂರಜ್ಞಾನಕ್ಕೆ ಆದ್ಯತೆ ನೀಡುವುದು ಸ್ವಾಗತಾರ್ಹ. 

ಸಿಬಿಡಿಸಿ ಬಗ್ಗೆಘಿ: ಸಿಬಿಡಿಸಿಯನ್ನು ಪರಿಚಯಿಸುತ್ತಿರು ವುದರಿಂದ ಭಾರತದಲ್ಲಿ ಡಿಜಿಟಲ್ ಆಧಾರಿತ, ದಕ್ಷ ಮತ್ತು ಪಾರದರ್ಶಕ ವ್ಯವಸ್ಥೆಜಾರಿಗೆ ಬರಲಿದೆ ಎಂಬ ಸಂದೇಶ ರವಾನೆಯಾದಂತಾಗಿದೆ. ಸಿಬಿಡಿಸಿಯು ಬ್ಲಾಕ್‌ಚೈನ್‌ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಜಾಗತಿಕ ಆರ್ಥಿಕತೆಯಲ್ಲಿ ಸಿಬಿಡಿಸಿಯನ್ನು ಬಲಪಡಿಸಲಿದೆ. ಈ ದೂರದೃಷ್ಟಿಯ ನಡೆಗಾಗಿ ನಾವು ಅಭಿನಂದಿಸುತ್ತಿದ್ದೇವೆ.

- ಸುಮಿತ್ ಗುಪ್ತಾಘಿ, ಸಹ ಸಂಸ್ಥಾಪಕ ಮತ್ತು ಸಿಇಒ, ಕಾಯಿನ್ ಡಿಸಿಎಕ್ಸ್‌ಘಿ, ಸಹ-ಅಧ್ಯಕ್ಷ, ಬಿಎಸಿಸಿ.

ಕ್ರಿಪ್ಟೋ ಕುರಿತ ಹೆಚ್ಚಿನ ಮಾಹಿತಿಗೆ  www.TimesDecrypt.com ನ್ನು  ನೋಡಿ.


ಕ್ರಿಪ್ಟೊ ಗಳ ಬಗ್ಗೆ ಕೇಂದ್ರ ಸರಕಾರದ ಇತ್ತೀಚಿನ ನಿಲುವೇನು?

  1.  ಭಾರತದಲ್ಲಿ ಕ್ರಿಪ್ಟೊ ಆಸ್ತಿಗಳನ್ನು ಖರೀದಿಸಿಬಹುದು.
  2.   ಕ್ರಿಪ್ಟೊ ಆಸ್ತಿಗಳ ಮಾರಾಟ ಕೂಡ ಮಾಡಬಹುದು
  3. ಕುದುರೆ ರೇಸ್, ಜೂಜು ಇತ್ಯಾದಿಗಳಲ್ಲಿ ಗಳಿಸಿದ ಆದಾಯದಂತೆ ಕ್ರಿಪ್ಟೊ ಮೂಲಕ ಗಳಿಸಿದ ಆದಾಯ ಪರಿಗಣನೆ
  4. ಕ್ರಿಪ್ಟೊ ಸೇರಿದಂತೆ ಎಲ್ಲ ವರ್ಚುವಲ್ ಆಸ್ತಿಗಳ ಮೇಲೆ ತೆರಿಗೆ ಅನ್ವಯವಾಗಲಿದೆ
  5. ವರ್ಚುವಲ್ ಆಸ್ತಿ ಗಳಿಕೆಯ ಮೇಲೆ ಶೇ.೩೦ರ ತೆರಿಗೆ ಅನ್ವಯವಾಗಲಿದೆ.

#kannada

Share the article on:

  • Facebook
  • Twitter
  • LinkedIn
  • WhatsApp

Related articles

  • ಕ್ರಿಪ್ಟೊ ಬಗ್ಗೆ ಬಹುತೇಕ ರಾಷ್ಟ್ರಗಳಿಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇಕೆ
  • ಕ್ರಿಪ್ಟೊ ಸಂಪೂರ್ಣ ನಿಷೇಧಕ್ಕೆ ಆರ್‌ಬಿಐ ಒಲವು, ತಜ್ಞರ ಆಕ್ಷೇಪ
  • ತೆರಿಗೆ ಮತ್ತು ವಿಧಾನ: ಕ್ರಿಪ್ಟೊ ಹೂಡಿಕೆದಾರರಿಗೆ ಬಜೆಟ್ ಹೇಗೆ ಮಿಶ್ರ ಫಲ
  • ಅಪಾಯದ ಹೊರತಾಗಿಯೂ ಯುವ ಹೂಡಿಕೆದಾರರನ್ನು ಸೆಳೆಯುತ್ತಿರುವ ಕ್ರಿಪ್ಟೋ ಟೆಕ್ ಬ್ಲಾಕ್‌ಚೈನ್
  • ಸೆಂಟ್ರಲ್ ಬ್ಯಾಂಕ್‌ಗಳು ತಮ್ಮ ಡಿಜಿಟಲ್ ಕರೆನ್ಸಿಗೆ ಅನ್ವೇಷಿಸುತ್ತಿದ್ದರೂ, ಕ್ರಿಪ್ಟೊಗೆ ವಿರೋಧವೇಕೆ?

Top categories

  • Crypto NEWS
  • Cryptocurrency
  • Blockchain
  • Economic
  • Legal

Read in your language

  • Bengali
  • Gujarati
  • Hindi
  • Kannada
  • Marathi

Stay up to date

Subscribe to our newsletter

Resources

  • Blockchain
  • Cryptocurrency
  • Legal
  • Crypto NEWS
  • Featured Videos

Important links

  • Ask an Expert
  • Webinars
  • About
  • Resources
  • Contact

Follow us

Catch the exclusive Times Decrypt coverage in TOI newspaper every Wednesday.

To start the doorstep delivery of your copy of TOI, visit subscribe.timesgroup.com

© Times Decrypt - All rights reserved. Powered by Leo Digital