ಮುಂಬಯಿ: ಕಳೆದ ೨೦೧೩ರಲ್ಲಿ ಕ್ರಿಸ್‌ಮಸ್‌ಗೆ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಭಾರತೀಯರಿಗೆ, ಕ್ರಿಪ್ಟೊ ಕರೆನ್ಸಿಗಳ ಹಣಕಾಸು, ಕಾನೂನು ಮತ್ತು ಭದ್ರತೆಗಳಿಗೆ ಸಂಬಂಸಿ ಎಚ್ಚರಿಕೆಯ ಟಿಪ್ಪಣಿ ಯನ್ನು ನೀಡಿತ್ತುಘಿ. ವಿಶ್ವದ ಮೊಟ್ಟ ಮೊದಲ ಕ್ರಿಪ್ಟೊ ಕರೆನ್ಸಿಯಾದ ಬಿಟ್ ಕಾಯಿನ್ ಬಿಡುಗಡೆಯಾದ ನಾಲ್ಕು ವರ್ಷಗಳ ನಂತರ ಆರ್‌ಬಿಐ ಈ ಎಚ್ಚರಿಕೆ ನೀಡಿತ್ತುಘಿ.
ಇದಾಗಿ ಎಂಟು ವರ್ಷಗಳ ನಂತರ ಕೂಡ ಕ್ರಿಪ್ಟೊ ವಿರುದ್ಧ ಆರ್‌ಬಿಐನ ವಿರೋಧ ಮತ್ತಷ್ಟು ಬಲವಾಗಿದೆ. ಈ ತಿಂಗಳಿನ ಆದಿಯಲ್ಲಿ ಆರ್‌ಬಿಐ ತನ್ನ ಮಂಡಳಿಗೆ ಕ್ರಿಪ್ಟೊ ವಿರುದ್ಧ ‘ಸಂಪೂರ್ಣ ನಿಷೇಧ’ ಅಗತ್ಯ ಎಂದು ತಿಳಿಸಿತ್ತುಘಿ. ಭಾಗಶಃ ನಿರ್ಬಂಧಗಳು ಪರಿಣಾಮಕಾರಿಯಾಗದು ಎಂದಿತ್ತುಘಿ. ಆರ್‌ಬಿಐ ೨೦೧೮ರಲ್ಲಿ ಭಾರತದಲ್ಲಿ ಕ್ರಿಪ್ಟೊ ವಹಿವಾಟನ್ನು ನಿಷೇಸಿತ್ತುಘಿ. ಕ್ರಿಪ್ಟೊಗಳನ್ನು ಮಾನ್ಯ ಮಾಡದಂತೆ ಬ್ಯಾಂಕ್‌ಗಳಿಗೆ ಆದೇಶಿಸಿತ್ತುಘಿ. ಹೀಗಿದ್ದರೂ ಸುಪ್ರೀಂ ಕೋರ್ಟ್ ೨೦೨೦ರಲ್ಲಿ ಆರ್‌ಬಿಐ ಆದೇಶವನ್ನು ಬದಿಗೊತ್ತಿತ್ತುಘಿ.
ಕ್ರಿಪ್ಟೊಗಳಿಂದ ಹಣಕಾಸು ಸ್ಥಿರತೆಗೆ ಧಕ್ಕೆಯಾಗಬಹುದು ಎಂದು ಆರ್‌ಬಿಐ ನಿರಂತರವಾಗಿ ಕಳವಳ ವ್ಯಕ್ತಪಡಿಸಿದೆ. ಕ್ರಿಪ್ಟೊಗಳ ಬಳಕೆಗೆ ಮುಕ್ತವಾಗಿ ಅವಕಾಶ ಸೃಷ್ಟಿಸಿದರೆ ಆರ್‌ಬಿಐ ಹಣಕಾಸು ನೀತಿಯ ಪರಿಣಾಮಗಳು ಸಡಿಲವಾಗಬಹುದು. ವರ್ಚುವಲ್ ಕರೆನ್ಸಿಗಳು ಬ್ಯಾಂಕ್‌ಗಳು ಮತ್ತು ಇತರ ನಿಯಂತ್ರಿತ ಸಂಸ್ಥೆಗಳನ್ನೂ ದುರ್ಬಲಗೊಳಿಸಬಲ್ಲುದು. ಕ್ರಿಪ್ಟೊಗಳ ದರಗಳಲ್ಲಿನ ತೀವ್ರ ಏರಿಳಿತಗಳು ಮತ್ತು ವರ್ಗಾವಣೆಗಳನ್ನು ಪತ್ತೆಹಚ್ಚುವಲ್ಲಿನ ಸವಾಲುಗಳು ಕೂಡ ಕಳವಳಕಾರಿಯಾಗಿವೆ ಎಂಬುದು ಆರ್‌ಬಿಐ ಅಭಿಮತವಾಗಿತ್ತುಘಿ.
ಇದಲ್ಲದೆ ಭಾರತದಂತಹ ರಾಷ್ಟ್ರದಲ್ಲಿ ಡಾಲರ್ ರೂಪದಲ್ಲಿ ಕೊಡಬೇಕಿಲ್ಲದ, ಡಿಜಿಟಲ್ ಕರೆನ್ಸಿ ಮಾರ್ಗವಾಗಿ ವಿದೇಶಿ ವಿನಿಮಯದ ನಿರ್ವಹಣೆ ಮಾಡುವುದು ಎಂದರೆ ಬಹಳ ಅಪಾಯಕಾರಿ ಸವಾಲಾಗಿ ಪರಿಣಮಿಸಬಹುದು ಎಂದು ಆರ್‌ಬಿಐ ಮೂಲಗಳು ತಿಳಿಸಿವೆ. ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಕೂಡ ಈ ಸವಾಲನ್ನು ಬೊಟ್ಟು ಮಾಡಿದ್ದಾರೆ. ಪ್ರಗತಿಶೀಲ ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳಿಗೆ ಇದು ದೊಡ್ಡ ಬೆದರಿಕೆಯಾಗಬಲ್ಲುದು ಎಂದಿದ್ದಾರೆ.
ಮುಂಬಯಿನ ಮಿಂಟ್ ರಸ್ತೆಯಿಂದ (ಆರ್‌ಬಿಐ ಕಚೇರಿ ) ಬಂದಿರುವ ದೃಷ್ಟಿಕೋನದ ಪ್ರಕಾರ, ಕ್ರಿಪ್ಟೊವನ್ನು ಕರೆನ್ಸಿ ಅಥವಾ ಒಂದು ಆಸ್ತಿಯಾಗಿ ಮಾನ್ಯತೆ ನೀಡಬಾರದು ಎಂಬುದಾಗಿತ್ತುಘಿ. ಇದರಿಂದ ಅಕ್ರಮವಾಗಿ ಹಣ ವರ್ಗಾವಣೆಗೆ ದಾರಿಯಾಗಲಿದೆ ಎಂಬ ಕಳವಳ ವ್ಯಕ್ತಪಡಿಸಲಾಗಿತ್ತುಘಿ.
ಸರಕಾರ ಇನ್ನೂ ತನ್ನ ನಿಲುವನ್ನು ದೃಢವಾಗಿ ವ್ಯಕ್ತಪಡಿಸಿಲ್ಲಘಿ. ಈ ಬಗ್ಗೆ ಒಮ್ಮತ ಮೂಡದಿರುವ ಹಿನ್ನೆಲೆಯಲ್ಲಿ ಕನಿಷ್ಠ ಮುಂದಿನ ಸಂಸತ್ ಅವೇಶನದ ತನಕ ಉದ್ದೇಶಿತ ವಿಧೇಯಕ ಮಂಡನೆ ಮುಂದೂಡಿಕೆಯಾಗಿದೆ.
ಹಣಕಾಸು ತಂತ್ರಜ್ಞಾನ ವಲಯದ ಸಂಸ್ಥೆಯೊಂದರ ಪ್ರಕಾರ, ಸರಕಾರದಲ್ಲಿ ಒಂದು ವರ್ಗವು ಕ್ರಿಪ್ಟೊಗಳ ಸಂಪೂರ್ಣ ನಿಷೇಧಕ್ಕೆ ವಿರೋಸುತ್ತಿರಬಹುದು. ಜಾಗತಿಕವಾಗಿ ಸಂಪರ್ಕಗಳ ಕಡಿತವಾಗುವ ಭೀತಿಯೂ ಇರಬಹುದು. ಚೀನಾ ಈ ವರ್ಷ ಕ್ರಿಪ್ಟೊವನ್ನು ನಿಷೇಸಿತ್ತುಘಿ. ಅದೇ ಕ್ಲಬ್‌ಗೆ ಭಾರತ ಸೇರಬಹುದು ಎಂಬ ಕಳವಳ ಇರಬಹುದು.
ಕಾನೂನು ತಜ್ಞರು ಹೇಳುವಂತೆ ಕ್ರಿಪ್ಟೊವನ್ನು ನಿಷೇಸಲೂ ಕಾಲ ಬಹಳ ವಿಳಂಬವಾಗಿದೆ. ಅವರ ಪ್ರಕಾರ ಸರಕಾರ ಸಮತೋಲನದ ನಿರ್ಧಾರವನ್ನು ಕೈಗೊಳ್ಳಬೇಕು. ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆಯಾಗದಂತೆಯೂ, ಇದೇ ವೇಳೆ ಯಾವುದೇ ಕ್ರಿಪ್ಟೊ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಬೆಳೆಯದಂತೆಯೂ ನೋಡಿಕೊಳ್ಳಬೇಕು. ಇದರ ಅನಿಯಂತ್ರಿತ ಬೆಳವಣಿಗೆಯಿಂದ ವಿದೇಶಿ ವಿನಿಮಯ ಸಂಗ್ರಹಕ್ಕೆ ಹಾಗೂ ಆರ್ಥಿಕತೆಗೆ ಧಕ್ಕೆಯಾಗದಂತೆಯೂ ನೋಡಿಕೊಳ್ಳಬೇಕು.
‘‘ ಸರಕಾರ ಕ್ರಿಪ್ಟೊ ಕರೆನ್ಸಿಗಳನ್ನು ಹೂಡಿಕೆಯ ಸಾಧನವಾಗಿ ನೋಡುತ್ತದೆ. ಮತ್ತು ಅವುಗಳನ್ನು ನಿಯಂತ್ರಿಸಲು ಬಯಸುತ್ತದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ ಕ್ರಿಪ್ಟೊ ಕರೆನ್ಸಿ ಒಂದು ಆಸ್ತಿಯಾಗಿ ಮಾನ್ಯತೆ ಪಡೆಯುವ ಹಾಗೂ ಕ್ಯಾಪಿಟಲ್ ಗೇನ್ಸ್ ತೆರಿಗೆಯ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ. ಜಿಎಸ್‌ಟಿ ಮತ್ತು ಟಿಡಿಎಸ್ ಇತರ ತೆರಿಗೆ ವ್ಯಾಪ್ತಿಯಾಗಿದ್ದುಘಿ, ಅದಕ್ಕೆ ಸಂಬಂಸಿ ಕಾನೂನು ಏನೆನ್ನುತ್ತದೆ ಎಂಬುದು ಸ್ಪಷ್ಟವಾಗಿಲ್ಲ’’ ಎಂದು ಲಕ್ಷ್ಮೀಕುಮಾರನ್ ಆ್ಯಂಡ್ ಶ್ರೀಧರನ್ ಅಟಾರ್ನೀಸ್‌ನ ಕಾರ‌್ಯಕಾರಿ ಪಾಲುದಾರರಾದ ಎಲ್. ಬದ್ರಿ ನಾರಾಯಣನ್ ಹೇಳುತ್ತಾರೆ.
ಕಾನೂನು ತಜ್ಞರ ಪ್ರಕಾರ, ಸಮಗ್ರವಾದ ನಿಯಂತ್ರಕ ವ್ಯವಸ್ಥೆ ಅಗತ್ಯಘಿ. ಅಭಿವೃದ್ಧಿ ಹೊಂದಿದ ದೇಶವಶಾದ ಬ್ರಿಟನ್‌ನಲ್ಲಿ ಕ್ರಿಪ್ಟೊಗಳ ಬಗ್ಗೆ ಕೈಗೊಂಡಿರುವಂಥ ನಿಯಂತ್ರಕ ವ್ಯವಸ್ಥೆಯನ್ನು ಭಾರತದಲ್ಲಿ ಅನುಸರಿಸಲು ಸಾಧ್ಯವಿಲ್ಲಘಿ. ಏಕೆಂದರೆ ವಿದೇಶಿ ವಿನಿಮಯ ನಿಯಂತ್ರಕ ವ್ಯವಸ್ಥೆಯಲ್ಲಿ ವ್ಯತ್ಯಾಸಗಳು ಇರುತ್ತವೆ.
‘‘ನೀವು ಭಾರತದಿಂದ ಅನುಮತಿ ಇಲ್ಲದೆ ಹಣವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲಘಿ. ನಮ್ಮದು ನಿಯಂತ್ರಿತ ವಿದೇಶಿ ವಿನಿಮಯ ಮಾರುಕಟ್ಟೆಯಾಗಿದೆ. ಮತ್ತು ನಾವು ಮುಕ್ತ ಮಾರುಕಟ್ಟೆ ಇರುವ ಹಾಗೂ ಅಭಿವೃದ್ಧಿ ಹೊಂದಿರುವ ವಿದೇಶಗಳಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ’’ ಎನ್ನುತ್ತಾರೆ ನಾರಾಯಣ್. ಭಾರತೀಯರು ವಿದೇಶಗಳಲ್ಲಿ ಕ್ರಿಪ್ಟೊ ಬಳಸದಂತೆ ನಿಷೇಸುವುದು ಕಷ್ಟಕರ ಎನ್ನುತ್ತಾರೆ ಅವರು.
ಕ್ರಿಪ್ಟೊ ಇಂಡಸ್ಟ್ರಿ ಕೂಡ ವಿದೇಶಿ ವಿನಿಮಯ ಮತ್ತು ತೆರಿಗೆ ಕಾನೂನುಗಳ ಬಗ್ಗೆ ಸ್ಪಷ್ಟತೆಯನ್ನು ನಿರೀಕ್ಷಿಸಿದೆ. ಫೆಮಾ ( ಎಫ್‌ಇಎಂಎ) ಕಾಯಿದೆಯ ಅಡಿಯಲ್ಲಿ (ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ) ಗಡಿಯಾಚೆಗಿನ ಸರಕು ಮತ್ತು ಸೇವೆಗಳ ಚಲನವಲನಗಳನ್ನು ಆಮದು ಮತ್ತು ರಫ್ತು ಎಂದು ವರ್ಗೀಕರಿಸಲಾಗಿದೆ. ಹೀಗಿದ್ದರೂ ಕ್ರಿಪ್ಟೊ ಟೋಕನ್‌ಗಳನ್ನು ಸರಕುಗಳೇ ಎಂಬುದನ್ನು ನಿಯಂತ್ರಕಗಳು ಪರಿಗಣಿಸಿಲ್ಲಘಿ’’ ಎನ್ನುತ್ತಾರೆ ಕ್ರಿಪ್ಟೊ ಎಕ್ಸ್‌ಚೇಂಜ್ ಕಾಯಿನ್‌ಡಿಸಿಎಕ್ಸ್‌ನ ಸಂಸ್ಥಾಪಕ, ಸಿಇಒ ಮತ್ತು ಉದ್ಯಮ ಮಂಡಳಿ ಬಿಎಸಿಸಿಯ ಸಹ-ಅಧ್ಯಕ್ಷರಾದ ಸುಮಿತ್ ಗುಪ್ತಾಘಿ.
ನಿಯಂತ್ರಕದ ಚಿಂತೆಗಳು
⮚ ಆರ್‌ಬಿಐ ೨೦೧೩ರಿಂದಲೂ ಕ್ರಿಪ್ಟೊಗಳನ್ನು ವಿರೋಸುತ್ತಾ ಬಂದಿದೆ.
⮚ ಕ್ರಿಪ್ಟೊ ವಿಕೇಂದ್ರೀಕರಣ ವಾಗಿರುವುದರಿಂದ ಸೆಂಟ್ರಲ್ ಬ್ಯಾಂಕ್‌ಗಳಿಗೆ ಆತಂಕಕಾರಿಯಾಗಿ ಪರಿಣಮಿಸಿವೆ. ಇದು ನಿಯಂತ್ರಕ ವ್ಯವಸ್ಥೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಬಹುದು ಎಂಬ ಆತಂಕ ಆರ್‌ಬಿಐನದ್ದಾಗಿದೆ.
⮚ ಕ್ರಿಪ್ಟೋಗಳ ದರಗಳಲ್ಲಿನ ತೀವ್ರ ಏರಿಳಿತ, ವರ್ಗಾವಣೆಯ ಕುರಿತ ಕಳವಳಗಳು ಇವೆ. ಏಕೆಂದರೆ ಇದನ್ನು ಆಸ್ತಿಯಾಗಿ ಮಾನ್ಯತೆ ನೀಡಿಲ್ಲಘಿ.
⮚ ಕ್ರಿಪ್ಟೊ ಮೂಲಕ ಪಾವತಿಗಳಿಗೆ ಅವಕಾಶ ನೀಡುವುದಿಲ್ಲವೆಂದು ಸರ್ಕಾರ ತಿಳಿಸಿದೆ. ಹೀಗಿದ್ದರೂ ಆಸ್ತಿಯಾಗಿ ಪರಿಗಣಿಸುವುದೇ ಎಂಬುದು ಸ್ಪಷ್ಟವಾಗಿಲ್ಲಘಿ.
⮚ ಕಾನೂನು ತಜ್ಞರು ಮತ್ತು ಫಿನ್‌ಟೆಕ್ ಪ್ಲೇಯರ್ ಪ್ರಕಾರ ಸರ್ಕಾರ ದಲ್ಲಿನ ಕ್ರಿಪ್ಟೊ ಸಂಪೂರ್ಣ ನಿಷೇಧಕ್ಕೆ ಆಕ್ಷೇಪಿಸುತ್ತಿದೆ. ಜಾಗತಿಕವಾಗಿ ಸಂಪರ್ಕ ಕಡಿತವಾಗುವ ಕಳವಳವೇ ಕಾರಣ.