ಭಾರತವು ಕ್ರಿಪ್ಟೊ ಕರೆನ್ಸಿ ಮತ್ತು ಎನ್‌ಎಫ್‌ಟಿಯಂಥ (ನಾನ್-ಫಂಜಿಬೆಲ್ ಟೋಕನ್) ಡಿಜಿಟಲ್ ಆಸ್ತಿಗಳಿಗೆ ತೆರಿಗೆಯನ್ನು ವಿಸಲು ನಿರ್ಧರಿಸಿರುವ ಕೆಲವು ರಾಷ್ಟ್ರಗಳಲ್ಲಿ ಒಂದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಇಂಥ ಆಸ್ತಿಗಳ ವರ್ಗವಣೆಗೆ ಶೇ.೩೦ರ ತೆರಿಗೆಯನ್ನು ವಿಸುವ ಪ್ರಸ್ತಾಪವನ್ನು ಪ್ರಕಟಿಸಿದ್ದಾರೆ. ಒಂದು ಆಸ್ತಿಗೆ ತೆರಿಗೆ ವಿಸುವುದರಿಂದ ಅದಕ್ಕೆ ನ್ಯಾಯ ಸಮ್ಮತಿಯನ್ನು ತಂದಂತೆ ಆಗುವುದಿಲ್ಲಘಿ ಎಂದು ಹಣಕಾಸು ಸಚಿವರು ಹೇಳಿದ್ದರೂ, ತೆರಿಗೆ ನೀತಿಯಲ್ಲಿ ಸ್ಪಷ್ಟತೆಯೇ ಕ್ರಿಪ್ಟೊಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಲಿದೆ. ಉದ್ಯಮ ವಲಯದ ಕೆಲ ನಾಯಕರ ಪ್ರಕಾರ, ಅಕ ತೆರಿಗೆಯ ಪರಿಣಾಮ ಹೂಡಿಕೆದಾರರು ನಿರುತ್ತೇಜನಗೊಳ್ಳಬಹುದು. ಅಸೀಮ್ ಗುಜಾರ್ ಮತ್ತು ಪಾರ್ಥಾ ಸಿನ್ಹಾ ಬಜೆಟ್ ಪ್ರಸ್ತಾಪ ಮತ್ತು ಹೂಡಿಕೆದಾರರಿಗೆ ಪರಿಣಾಮಗಳ ಬಗ್ಗೆ ಉದ್ಯಮ ತಜ್ಞರು ಏನೆನ್ನುತ್ತಾರೆ ಎಂಬುದನ್ನು ವಿವರಿಸಿದ್ದಾರೆ.
ಬ ಜೆಟ್ ಪ್ರಸ್ತಾಪದಲ್ಲಿ ಕ್ರಿಪ್ಟೊಗಳನ್ನು ಉಡುಗೊರೆ ಸೇರಿದಂತೆ ಯಾವುದೇ ರೂಪದಲ್ಲಿ ವರ್ಗಾಯಿಸುವುದರ ಮೇಲೆ ಶೇ.೩೦ ತೆರಿಗೆ ಅನ್ವಯವಾಗುತ್ತದೆ. ಹೆಚ್ಚುವರಿಯಾಗಿ ಇಂಥ ಆಸ್ತಿಗಳ ವರ್ಗಾವಣೆಯಲ್ಲಿ ಉಂಟಾಗುವ ನಷ್ಟಗಳಿಗೆ ಪ್ರತಿಯಾಗಿ ಬೇರೆ ಆದಾಯಗಳಿಂದ ಭರಿಸಲಾಗುವುದಿಲ್ಲಘಿ. ಇದು ರಿಟೇಲ್ ಹೂಡಿಕೆದಾರರಿಗೆ ಜೂಜು ಅಥವಾ ಬೆಟ್ಟಿಂಗ್ ರೀತಿಯ ವಹಿವಾಟಿನ ವಿರುದ್ಧ ನೀಡಿರುವ ಸಂದೇಶವಾಗಿದೆ ಎನ್ನುತ್ತಾರೆ ವಿಶ್ಲೇಷಕರು.
ಹೂಡಿಕೆದಾರರನ್ನು ಉತ್ತೇಜಿಸುವುದೇ - ನಿರಾಸೆಗೊಳಿಸಬಹುದೇ?
ಉದ್ಯಮದ ತಜ್ಞರ ಪ್ರಕಾರ ಹೊಸ ಹೂಡಿಕೆದಾರರಿಗೆ ಕ್ರಿಪ್ಟೊ ಮಾರುಕಟ್ಟೆಗೆ ಬರಲು ಬಜೆಟ್ ಪ್ರಸ್ತಾಪ ಉತ್ತೇಜಿಸಲಿದೆ. ಸರಕಾರದ ಈ ನಡೆಯ ಪರಿಣಾಮ ಹೂಡಿಕೆದಾರರಲ್ಲಿ ಕ್ರಿಪ್ಟೊಗಳ ಬಗ್ಗೆ ಇದ್ದ ಕಾನೂನಾತ್ಮಕ ಕಳವಳಗಳು ಬಗೆಹರಿದಿವೆ ಎನ್ನುತ್ತಾರೆ ಕ್ರಿಪ್ಟೊ ಎಕ್ಸ್ ಚೇಂಜ್ ವಯುಲ್ಡ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ದರ್ಶನ್ ಬಾಥಿಜಾ. ಹೆಚ್ಚು ಭಾರತೀಯರು ಹೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ ಅವರು.
ಹೀಗಿದ್ದರೂ ಕ್ರಿಪ್ಟೊ ಕೇಂದ್ರ ಯುನೊಕಾಯಿನ್‌ನ ಸಹ ಸಂಸ್ಥಾಪಕ ಸಾತ್ವಿಕ್ ವಿಶ್ವನಥ್ ಪ್ರಕಾರ, ‘‘ಶೇ.೩೦ ತೆರಿಗೆ ಎಲ್ಲ ಆಸ್ತಿ ವರ್ಗಗಳಲ್ಲಿಯೇ ಅಕ. ಇದು ಹಳೆಯ ಹೂಡಿಕೆದಾರರನ್ನು ನಿರುತ್ತೇಜನಗೊಳಿಸ ಬಹುದು. ಆದರೆ ಹೊಸ ಹೂಡಿಕೆದಾರರಿಗೆ ತೆರಿಗೆ ಬಗ್ಗೆ ಸ್ಪಷ್ಟತೆ ಇರುವುದರಿಂದ ಹೂಡಿಕೆಗೆ ಮುಂದೆ ಬರಬಹುದು’’.
ಭಾರತದ ಅತಿ ದೊಡ್ಡ ಕ್ರಿಪ್ಟೊ ಎಕ್ಸ್‌ಚೇಂಜ್ ಕಾಯಿನ್ ಡಿಸಿಎಕ್ಸ್‌ನ ಸಿಇಒ ಮತ್ತು ಸಹ ಸಂಸ್ಥಾಪಕ ಸುಮಿತ್ ಗುಪ್ತಾ ಪ್ರಕಾರ, ತೆರಿಗೆಯ ಪ್ರಮಾಣ ಅಕವಾಗಿದೆ. ಇದು ಕ್ರಿಪ್ಟೊ ವಹಿವಾಟಿನ ಮೇಲೆ ಪ್ರಭಾವ ಬೀರಬಲ್ಲುದು. ಕ್ರಿಪ್ಟೊಗೆ ವಿಶೇಷ ಕೌಶಲ ಅಗತ್ಯಘಿ. ಇದನ್ನು ಜೂಜಿಗೆ ಹೋಲಿಸಲು ಸಾಧ್ಯವಿಲ್ಲಘಿ. ಈ ಈಕ್ವಿಟಿ ವಲಯದಲ್ಲಿ ಹೂಡಿಕೆದಾರರಿಗೆ ಅವರ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡಲು ಅವಕಾಶ ಇದೆ. ಇದೇ ಮಾದರಿಯನ್ನು ಕ್ರಿಪ್ಟೊಗೆ ನೀಡಬಹುದಿತ್ತುಘಿ.
ಷೇರುಗಳ ಜತೆಗೆ ಹೋಲಿಕೆ ಹೇಗೆ?
ಶೇ.೩೦ ತೆರಿಗೆ ಎಂದರೆ ಹೂಡಿಕೆದಾರರಿಗೆ ಷೇರುಗಳಲ್ಲಿ ಸಿಗುವುದಕ್ಕಿಂತಲೂ ಹೆಚ್ಚು ಆದಾಯ ಕ್ರಿಪ್ಟೊಗಳಲ್ಲಿ ಸಿಗಬೇಕು. ಅಂಥ ಗುರಿ ಹೊಂದಿರಬೇಕು ಎನ್ನುತ್ತಾರೆ ವಿಶ್ಲೇಷಕರೊಬ್ಬರು. ಉದಾಹರಣೆಗೆ ಷೇರುಗಳ ಮಾರಾಟದಿಂದ ೧ ವರ್ಷದ ಬಳಿಕ ತೆರಿಗೆಯ ನಂತರ ೧.೧ ಲಕ್ಷ ರೂ. ಸಿಕ್ಕಿದರೆ, ೧೦ ಲಕ್ಷ ರೂ. ಹೂಡಿಕೆಗೆ ಶೇ.೧೨ ಆದಾಯ ಬರಬೇಕು. ಆದರೆ ಇದೇ ರೀತಿ ಬಿಟ್ ಕಾಯಿನ್‌ನಿಂದ ಆದಾಯ ಬರಬೇಕಿದ್ದರೆ ಶೇ.೧೫.೪ಕ್ಕೂ ಹೆಚ್ಚು ಅದಾಯ ಸಿಗಬೇಕಾಗುತ್ತದೆ. ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡುವ ಅವಕಾಶ ಇದೆ. ಕಠಿಣ ನಿಯಂತ್ರಕ ವ್ಯವಸ್ಥೆ
ಇವೈಯ ಫೋರೆನ್ಸಿಕ್ ಮತ್ತು ಸಮಗ್ರ ಸೇವಾ ವಿಭಾಗದ ಪಾಲುದಾರರಾದ ಮುಕುಲ್ ಶ್ರೀವಾಸ್ತವ ಪ್ರಕಾರ, ಅಕ ತೆರಿಗೆಯ ಪರಿಣಾಮ ಹೂಡಿಕೆದಾರರು ಹೆಚ್ಚು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬಹುದು.
ಕಾನೂನು ತಜ್ಞರ ಪ್ರಕಾರ ಹೂಡಿಕೆದಾರರು ಹೆಚ್ಚುವರಿ ವಿವರಗಳನ್ನು ತೆರಿಗೆದಾರರಾಗಿ ಸಲ್ಲಿಸಬೇಕಾಗಬಹುದು. ಐಟಿ ರಿಟರ್ನ್‌ನಲ್ಲಿ ಕ್ರಿಪ್ಟೊ ಆದಾಯ ಬಗ್ಗೆ ಪ್ರತ್ಯೇಕ ಕಾಲಂ ಜಾರಿಯಾಗಲಿದೆ.
ಅಲ್ಲಿ ವಿವರ ಸಲ್ಲಿಸಬೇಕಾಗುತ್ತದೆ. ಅಕ ಕರ ಕ್ರಿಪ್ಟೊಗಳ ಮೇಲೆ ಕಠಿಣ ನಿಯಂತ್ರಣವನ್ನು ತರಬಹುದು. ಸರಕಾರ ಡಿಜಿಟಲ್ ಆಸ್ತಿಗಳ ವರ್ಗಾವಣೆಗಳಲ್ಲಿ ನಿರ್ದಿಷ್ಟ ಮಿತಿಯ ನಂತರ ಶೇ.೧ ಟಿಡಿಎಸ್ ಅನ್ನೂ ಜಾರಿಗೊಳಿಸುವ ಪ್ರಸ್ತಾಪವನ್ನು ಬಜೆಟ್ ನಲ್ಲಿ ಪ್ರಕಟಿಸಿದೆ.
ಏಪ್ರಿಲ್‌ಗೆ ಮುನ್ನ ಮಾರಾಟದ ಭರಾಟೆ?
ಬಜೆಟ್ ದಿನ ಕ್ರಿಪ್ಟೊ ದರಗಳು ಏರುಗತಿಯಲ್ಲಿತ್ತುಘಿ. ಹೂಡಿಕೆದಾರರು ಶೇ.೩೦ ತೆರಿಗೆಯಿಂದ ತಪ್ಪಿಸಿಕೊಳ್ಳಲು ೨೦೨೨ರ ಏಪ್ರಿಲ್ ೧ಕ್ಕೆ ಮುನ್ನ ಮಾರಾಟ ಮಾಡಲು ಮುಂದಾಗಬಹುದು. ಹಾಲಿ ಹೂಡಿಕೆದಾರರಿಗೆ ೨೦೨೨ರ ಏಪ್ರಿಲ್‌೧ಕ್ಕೆ ಮುನ್ನ ಹೊಂದಿರುವ ಕ್ರಿಪ್ಟೊಗಳಿಗೆ ಕ್ಯಾಪಿಟಲ್ ಗೇನ್ಸ್ ಮಾದರಿಯಲ್ಲಿ ತೆರಿಗೆ ಅನ್ವಯಿಸಬಹುದು ಎನ್ನುತ್ತಾರೆ ಲಕ್ಷ್ಮೀ ಕುಮಾರನ್ ಆ್ಯಂಡ್ ಶ್ರೀಧರಾರ್ ಅಟಾರ್ನಿಯ ಕಾರ್ಯಕಾರಿ ಪಾಲುದಾರ ಎಲ್ ಬದ್ರಿ ನಾರಾಯಣನ್ ತಿಳಿಸಿದ್ದಾರೆ. ಕ್ರಿಪ್ಟೊಗಳಲ್ಲಿ ಹೂಡಿಕೆ ಮಾಡುವ ರಿಸ್ಕ್ ತೆಗೆದುಕೊಂಡು ಆದಾಯ ಗಳಿಸುವ ಆಲೋಚನೆಯಲ್ಲಿದ್ದ
ಮಧ್ಯಮ ವರ್ಗದ ಹೂಡಿಕೆದಾರರು ತೆರಿಗೆ ನೀತಿ ಅಪ್ರಯೋಗಿಕ ಎಂದು ಭಾವಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.
ಗ್ಲೋಬಲ್ ಬ್ಲ್ಯಾಕ್ ಚೈನ್ ವೆಂಚರ್ ಅಂಟ್ಲರ್‌ನ ಮುಖ್ಯಸ್ಥ ನಿತಿನ್ ಶರ್ಮ ಪ್ರಕಾರ, ಸಕ್ರಯ ಹೂಡಿಕೆದಾರರಿಗೆ ಹೆಚ್ಚು ಪ್ರಭಾವ ಬೀರಲಿದೆ. ಜಪಾನ್‌ನಲ್ಲಿ ಶೇ.೫೫ರ ತೆರಿಗೆ ಶ್ರೇಣಿ ಇದೆ ಎನ್ನುತ್ತಾರೆ ಅವರು.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ www.TimesDecrypt.com
೩೦% ತೆರಿಗೆ, ಜೂಜಿನ ವಿರುದ್ಧ ಸಂದೇಶ ರವಾನೆ
⮚ ಬಜೆಟ್‌ನಲ್ಲಿ ಕ್ರಿಪ್ಟೊ ಇತ್ಯಾದಿ ಡಿಜಿಟಲ್ ಆಸ್ತಿಗಳ ವ್ಯವಹಾರಗಳಿಗೆ ಶೇ.೩೦ ತೆರಿಗೆ ವಿಸಿರುವುದನ್ನು ಉದ್ಯಮ ವಲಯದ ತಜ್ಞರು ಸ್ವಾಗತಿಸಿದ್ದರೂ, ತೆರಿಗೆ ಅಕ ವಾಯಿತು. ಹಾಗೂ ಹೂಡಿಕೆದಾರರನ್ನು ನಿರುತ್ತೇಜನಗೊಳಿಸಲಿದೆ ಎಂದು ಹೇಳಿದ್ದಾರೆ.
⮚ ಮತ್ತೊಂದು ವರ್ಗವು ಅಕ ತೆರಿಗೆಯ ಪರಿಣಾಮ ಹೊಸ ಹೂಡಿಕೆದಾರರಲ್ಲಿ ವಿಶ್ವಾಸ ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
⮚ ಉದ್ಯಮ ತಜ್ಞರ ಪ್ರಕಾರ ಸರಕಾರದ ನಡೆಯಿಂದ ರಿಟೇಲ್ ಹೂಡಿಕೆದಾರರಿಗೆ ಜೂಜಿನ ಅಥವಾ ಬೆಟ್ಟಿಂಗ್ ಮಾದರಿಯ ವ್ಯವಹಾರಗಳಲ್ಲಿ ವಿಸುವ ಅಕ ತೆರಿಗೆಯನ್ನು ವಿಸಿ ಸಂದೇಶವನ್ನು ರವಾನಿಸಿದಂತಾಗಿದೆ.
⮚ ಸರಕಾರಕ್ಕೆ ಲಭಿಸಿರುವ ದೊಡ್ಡ ಗೆಲುವು ಯಾವುದೆಂದರೆ ಡಿಜಿಟಲ್ ಆಸ್ತಿಗಳಿಗೆ ತೆರಿಗೆ ವಿಸಲು ಸಾಧ್ಯ ಎಂಬುದು ಮನವರಿಕೆ ಆಗಿರುವುದು.
ಕ್ರಿಪ್ಟೊಗಳು ಹೊಸ ಆಸ್ತಿ ವರ್ಗವಾಗಿದ್ದುಘಿ, ದೀರ್ಘಕಾಲೀನ ಆದಾಯಕ್ಕಾಗಿ ಇದರಲ್ಲಿ ಸಕ್ರಮ ರೀತಿಯತಲ್ಲಿ ಹೂಡಿಕೆ ಮಾಡಲು ಬಯಸುವವರು ಅಕ ತೆರಿಗೆ ಆದರೂ ಈಗ ಹೆಚ್ಚು ನೆಮ್ಮದಿ ಮತ್ತು ನಿರಾಳತೆಯನ್ನು ಅನುಭವವಿಸುವ ಸಾಧ್ಯತೆ ಇದೆ.
- ನಿತಿನ್ ಶರ್ಮಾ ್ಭ
ಗ್ಲೋಬಲ್ ಬ್ಲಾಕ್‌ಚೈನ್ ಲೀಡ್, ಅಂಟ್ಲೆರ್