ನೀವು ಒಂದು ವರ್ಷದ ಹಿಂದೆ ಬಿಟ್‌ಕಾಯಿನ್‌ನಲ್ಲಿ ೧ ಲಕ್ಷ ರೂ. ಹೂಡಿಕೆ ಮಾಡಿರುತ್ತಿದ್ದರೆ, ತನ್ನ ಸಾರ್ವಕಾಲಿಕ ಎತ್ತರದಿಂದ ಶೇ.೩೦ ಕುಸಿತದ ಹೊರತಾಗಿಯೂ, ಅದರ ಮೌಲ್ಯ ಈಗ ಸುಮಾರು ೧.೭ ಲಕ್ಷ ರೂ.ಗಳಾಗುತ್ತಿತ್ತುಘಿ. ಹೋಲಿಕೆ ಮಾಡುವುದಿದ್ದರೆ ಇದೇ ಮೊತ್ತವನ್ನು ಸೆನ್ಸೆಕ್ಸ್‌ನಲ್ಲಿ ಹೂಡಿರುತ್ತಿದ್ದರೆ, ಸುಮಾರು ೧.೨ ಲಕ್ಷ ರೂ.ಗೆ ಬೆಳೆಯುತ್ತಿತ್ತುಘಿ.
ನಿಯಂತ್ರಕ ವ್ಯವಸ್ಥೆಯ ಕೊರತೆ ಮತ್ತು ತೀವ್ರ ಏರಿಳಿತದ ನಡುವೆಯೂ ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಈ ಟ್ರೆಂಡ್ ಕೇವಲ ಹೆಚ್ಚು ಆದಾಯದ ಕಾರಣದಿಂದ ಮಾತ್ರ ಉಂಟಾಗಿದ್ದಲ್ಲಘಿ. ಕೆಲವರು ಕ್ರಿಪ್ಟೋವನ್ನು ಬ್ಲಾಕ್‌ಚೈನ್ ತಂತ್ರಜ್ಞಾನಕ್ಕೋಸ್ಕರ ಖರೀದಿಸುತ್ತಾರೆ. ಮತ್ತೆ ಇತರರಿಗೆ ಅತ್ಯುತ್ತಮವಾಗಿ ವಿನ್ಯಾಸಗೊಳಿಸಿದ ಆ್ಯಪ್‌ಗಳು ಆಕರ್ಷಿಸುತ್ತವೆ. ಟೈಮ್ಸ್ ಆಫ್ ಇಂಡಿಯಾ (ಟಿಒಐ), ಯುವ ಕ್ರಿಪ್ಟೊ ಹೂಡಿಕೆದಾರರನ್ನು ಸಂದರ್ಶಿಸಿ, ೨೦೨೨ರಲ್ಲಿ ಅವರ ಗುರಿಗಳು, ಕಾರ್ಯತಂತ್ರಗಳು, ಅನಿಶ್ಚಿತತೆಯ ತಲ್ಲಣಗಳ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿತು.
ಬ್ಲಾಕ್ ಚೈನ್-ಎಂದರೆ ಒಂದು ಸುಭದ್ರಘಿ, ವಿಕೇಂದ್ರೀಕರಣಗೊಂಡಿರುವ ಲೆಡ್ಜರ್ ಆಗಿದ್ದುಘಿ, ಕ್ರಿಪ್ಟೊವನ್ನು ಸಕ್ರಿಯಗೊಳಿಸುತ್ತದೆ. ಕ್ರಿಪ್ಟೊ ಹಲವು ಹ್ಯಾಕರ್‌ಗಳ ಗಮನವನ್ನೂ ಸೆಳೆದಿತ್ತುಘಿ. ‘‘ನನ್ನ ಕುಟುಂಬವು ಭೂಮಿಯ ವರ್ಗಾವಣೆಯಲ್ಲಿ ಹಲವಾರು ತೊಂದರೆಗಳನ್ನು ಎದುರಿಸಿತ್ತುಘಿ. ಬ್ಲಾಕ್‌ಚೈನ್ ಇಂಥ ಲೆಡ್ಜರ್ ನಿರ್ವಹಣೆ ಕುರಿತ ಸಮಸ್ಯೆಗಳನ್ನು ಬಗೆಹರಿಸಲಿದೆ’’ ಎನ್ನುತ್ತಾರೆ ಟಿಒಐ ಜತೆ ಮಾತನಾಡಿದ, ಹೆಸರನ್ನು ಹೇಳಲು ಇಚ್ಛಿಸದ ಬೆಂಗಳೂರು ಮೂಲದ ಆ್ಯಪ್ ಡೆವಲಪರ್.
ಕಾನೂನು ವಿದ್ಯಾರ್ಥಿಯೊಬ್ಬರು ತಮಗೆ ಕ್ರಿಪ್ಟೊ ಹೂಡಿಕೆಯ ಆಯ್ಕೆಗಿಂತಲೂ ಮಿಗಿಲಾಗಿದೆ ಎಂದರು. ‘‘ ವಿಕೇಂದ್ರೀಕರಣದ ಭಾಗವಾಗಿ ನಾನು ಇದನ್ನು ಇಷ್ಟಪಡುತ್ತೇನೆ. ಬ್ಲಾಕ್‌ಚೈನ್‌ನಿಂದ ನಕಲು ಮತ್ತು ಪಾರದರ್ಶಕತೆ ಕುರಿತ ಹಲವಾರು ಸಮಸ್ಯೆಗಳನ್ನು ಬಗೆಹರಿಸಬಹುದು’’ ಎನ್ನುತ್ತಾರೆ ಅವರು.
ಹೂಡಿಕೆದಾರರಿಗೆ ಕ್ರಿಪ್ಟೋವನ್ನು ಪಾವತಿಗೆ ಬಳಸಲು ಅನುಮತಿ ದೊರೆಯುವುದಿಲ್ಲ ಎಂಬ ಅರಿವು ಇದೆ. ಅವರಿಗೆ ಇದು ಸರಳವಾಗಿ ಭವಿಷ್ಯದ ತಂತ್ರಜ್ಞಾನ. ಹೀಗಿದ್ದರೂ, ಒಂದು ವೇಳೆ ನಿಷೇಧ ಜಾರಿಯಾದರೆ ಕ್ರಿಪ್ಟೊದಲ್ಲಿನ ತಮ್ಮ ಹಣಕಾಸು ಹೂಡಿಕೆಯ ಸ್ಥಿತಿಗತಿಗಳ ಬಗ್ಗೆ ಎಚ್ಚರವನ್ನೂ ಹೊಂದಿದ್ದಾರೆ. ಹಲವಾರು ಮಂದಿ ಕಳೆದರೆ ಎಷ್ಟು ನಷ್ಟ ಭರಿಸಬಹುದೋ, ಅಷ್ಟು ಮಾತ್ರ ಹೂಡಿದ್ದಾರೆ. ಬೆಂಗಳೂರು ಮೂಲದ ಆ್ಯಪ್ ಡೆವಲಪರ್ ೧ ಲಕ್ಷ ರೂ.ಗಿಂತ ಕಡಿಮೆ ಮೊತ್ತವನ್ನು ಹೂಡಿದ್ದಾರೆ. ಮತ್ತೊಬ್ಬ ಹೂಡಿಕೆದಾರರು ತಮ್ಮ ಒಟ್ಟಾರೆ ಹೂಡಿಕೆಯಲ್ಲಿ ಕೇವಲ ಶೇ.೫ರಷ್ಟನ್ನು ಮಾತ್ರ ಕ್ರಿಪ್ಟೊ ಹೂಡಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮತ್ತೆ ಇತರರಿಗೆ ಕ್ರಿಪ್ಟೊ ಹೂಡಿಕೆಯ ಸಾಧನವಾದ್ದರಿಂದ ಅದನ್ನು ಮರೆಯಲು ಕಷ್ಟಘಿ. ‘‘ಟೆಕ್ನಾಲಜಿ ಕ್ರಿಪ್ಟೊ ಎಕ್ಸ್‌ಚೇಂಜ್ ಕೇಂದ್ರಗಳನ್ನು ಯುಐ/ಯುಎಕ್ಸ್ ( ಬಳಕೆದಾರರ ಸಂಪರ್ಕ/ ಬಳಕೆದಾರರ ಅನುಭವ) ವಹಿವಾಟು ಸಲುವಾಗಿ ಬಳಸಲಾಗುತ್ತದೆ. ವಹಿವಾಟು ನಡೆಯುತ್ತಿರುವ ಷೇರುಗಳ ವಿವರವನ್ನು ಸರಳವಾಗಿ ಪ್ರದರ್ಶಿಸಲು ದೊಡ್ಡ ಬ್ಯಾಂಕ್‌ಗಳಿಗೂ ಸಾಧ್ಯವಾಗಿಲ್ಲಘಿ’’ ಎನ್ನುತ್ತಾರೆ ಹೂಡಿಕೆದಾರರೊಬ್ಬರು.
ಗುರುಗ್ರಾಮ ಮೂಲದ ೨೬ ವರ್ಷ ವಯಸ್ಸಿನ ಹೂಡಿಕೆದಾರರೊಬ್ಬರು, ಟಿವಿ ಜಾಹೀರಾತು ನೋಡಿದ ನಂತರ ಕಳೆದ ಮೇ ತಿಂಗಳಿನಲ್ಲಿ ಕ್ರಿಪ್ಟೊ ವಿನಿಮಯ ಕೇಂದ್ರವೊಂದರಲ್ಲಿ ಖಾತೆ ತೆರೆದಿದ್ದರು. ‘‘ಮೊದಲು ಕೇವಲ ಹೂಡಿಕೆಯ ಉದ್ದೇಶಕ್ಕಾಗಿ ಖಾತೆ ತೆರೆದಿದ್ದೆಘಿ.ಆದರೆ ಒಂದು ಸಲ ಕ್ರಿಪ್ಟೊ ಹಿಂದಿರುವ ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದ ನಂತರ ಮತ್ತಷ್ಟು ಹೂಡಿಕೆ ಮಾಡಿದೆ’’ ಎನ್ನುತ್ತಾರೆ ಅವರು. ಯುವ ಹೂಡಿಕೆದಾರ ತನ್ನ ೩ ಲಕ್ಷ ರೂ. ಹೂಡಿಕೆ
ಸುಮಾರು ಮೂರು ಪಟ್ಟು ವೃದ್ಧಿಸಿರುವುದನ್ನು ಕಂಡಿದ್ದಾರೆ.
ಬಹುತೇಕ ಹೂಡಿಕೆದಾರರು ಇಂಥ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಸ್ವಲ್ಪ ಖರೀದಿಸುವುದು ಮತ್ತು ಅಗತ್ಯ ಇದ್ದರೆ ಮಾತ್ರ ಮಾರಾಟ ಮಾಡುವುದು. ಹೀಗಿದ್ದರೂ ಕ್ರಿಪ್ಟೊ ಹೂಡಿಕೆದಾರರು ಅಹವಾಲು ಸಲ್ಲಿಸುವ ವ್ಯವಸ್ಥೆಯನ್ನು ಹೊಂದಿಲ್ಲಘಿ. ಬ್ಯಾಂಕ್‌ಗಳು ಏಕಪಕ್ಷೀಯವಾಗಿ ಕ್ರಿಪ್ಟೊ ಎಕ್ಸ್‌ಚೇಂಜ್‌ಗಳಿಗೆ ಸೇವೆಯನ್ನು ನಿರಾಕರಿಸಿವೆ. ಇದರ ಪರಿಣಾಮ ಹೂಡಿರುವ ಹಣವನ್ನು ಹಿಂತೆಗೆದುಕೊಳ್ಳುವುದು ದುಃಸ್ವಪ್ನವಾಗಿದೆ ಎನ್ನುತ್ತಾರೆ ಹೂಡಿಕೆದಾರರೊಬ್ಬರು.
ನಿಯಂತ್ರಕದ ಕೊರತೆ ಮತ್ತು ನಿಷೇಧದ ಭೀತಿ ಹಿನ್ನೆಲೆಯಲ್ಲಿ ಕೆಲವು ಭಾರತೀಯ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ವಿದೇಶಿ ಕ್ರಿಪ್ಟೊ ವಿನಿಮಯ ಕೇಂದ್ರಗಳಿಗೆ ವರ್ಗಾಯಿಸಿದ್ದಾರೆ. ಬ್ಲಾಕ್‌ಚೈನ್ ಬೆಂಬಲಿಗರು ಕಳಪೆ ಕ್ರಿಪ್ಟೊ ಕರೆನ್ಸಿಗಳ ಅಥೌಆ ‘ಶಿಟ್‌ಕಾಯಿನ್ಸ್’ ಕುರಿತ ಬಲೆಗೆ ಸಿಲುಕುವ ಬಗ್ಗೆಯೂ ಕಳವಳ ಹೊಂದಿದ್ದಾರೆ. ಅಂದರೆ ಕಡಿಮೆ ಗುಣಮಟ್ಟದ ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಆತಂಕಿತರಾಗಿದ್ದಾರೆ. ಇದೇ ವೇಳೆ ಕಳೆದ ಎರಡು ವರ್ಷಗಳಲ್ಲಿ ಪ್ರಬಲವಾಗಿ ಮುಂದುವರಿದಿರುವ ಕ್ರಿಪ್ಟೋಗಳಿಗೆ ೨೦೨೨ ವರ್ಚುವಲ್ ಕರೆನ್ಸಿಗಳಾಗಿ ಅಂಥ ಒಳ್ಳೆಯ ವರ್ಷ ಆಗಲಾರದು. ‘ಬಿಟ್ ಕಾಯಿನ್ ಅಲ್ಪಾವಗೆ ಇಳಿಮುಖದ ಟ್ರೆಂಟ್ ಎದುರಿಸುತ್ತಿದೆ’’ ಎನ್ನುತ್ತಾರೆ ಆಟುಸ್
ಇನ್ವೆಸ್ಟ್‌ಮೆಂಟ್‌ನ ಸ್ಥಾಪಕ ರಾಜೇಂದ್ರ ಅಗರವಾಲ್.
ಕ್ರಿಪ್ಟೋ ಕುರಿತ ಹೆಚ್ಚಿನ ಮಾಹಿತಿಗೆ www.TimesDecrypt.com ನ್ನು ನೋಡಿ.
ವಿಕೇಂದ್ರಿಕೃತ ಸಂಪರ್ಕಜಾಲಕ್ಕೆ ಬೆಂಬಲ
⮚ ಬ್ಲಾಕ್‌ಚೈನ್ ಕ್ರಿಪ್ಟೋಗೆ ಅತ್ಯಂತ ಅನುಕೂಲಕರವಾಗಿ ಬೆಂಬಲಿಸುವ ಆಧಾರವೆನಿಸಿದೆ
⮚ಇದು ಯಾವುದೇ ರೀತಿಯ ಸಂಪರ್ಕಜಾಲದಲ್ಲಿನ ಕೇಂದ್ರಿಕೃತವಾದ ವ್ಯವಹಾರ ಗಳ ಖಾತಾ ಪುಸಕ್ತವಾಗಿದೆ. ಈ ತಂತ್ರಜ್ಞಾನ ಬಳಸಿ ಭಾಗೀದಾರರು, ಯಾವುದೇ ಅನ್ಯ ವ್ಯಕ್ತಿ ಅಥವಾ ಕೇಂದ್ರೀಕೃತ ಪ್ರಾಕಾರದ ನೆರವಿಲ್ಲದಂತೆ ವ್ಯವಹಾರಗಳನ್ನು ಪರಿಶೀಲಿಸಬಹುದು.
⮚ ಪಾರದರ್ಶಕತೆ ಮತ್ತು ಪುನರುಕ್ತಿಗಳ ವಿಷಯದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಇದರ ಸಾಮರ್ಥ್ಯ ಗಮನ ಸೆಳೆದಿದೆ.
⮚ ವ್ಯವಹಾರ ಕುದುರಿಸುವಿಕೆ ಹಾಗೂ ಮತ ನೀಡುವಿಕೆಗಳೂ ಸೇರಿದಂತೆ ಹಲವು ಉದ್ದೇಶಗಳಿಗೆ ಬ್ಲಾಕ್‌ಚೈನ್‌ನ್ನು ಬಳಸಬಹುದು.
⮚ ಬ್ಲಾಕ್‌ಚೈನ್ ‘ಟ್ರಸ್ಟ್‌ರಹಿತ’ ಸಂಪರ್ಕಜಾಲವಾಗಿದ್ದುಘಿ, ವ್ಯವಹರಿಸುವ ಪಾರ್ಟಿಗಳು ಪರಸ್ಪರ ನಂಬಬೇಕಿಲ್ಲ. ಅದರ ಬದಲಿಗೆ ತಂತ್ರಜ್ಞಾನವೇ ನಿಮಗೆ ಸುಭದ್ರತೆ, ಪಾರದರ್ಶಕತೆ ಹಾಗೂ ಪತ್ತೆಹಚ್ಚುವಿಕೆಗಳ ಭರವಸೆ ನೀಡುತ್ತದೆ.
⮚ ಇದು ವ್ಯವಹಾರಗಳ ಪ್ರಕ್ರಿಯೆಗಳಿಗೆ ಸಮರ್ಥಶೀಲತೆ ನೀಡಿ ವೆಚ್ಚಗಳನ್ನು ತಗ್ಗಿಸಲು ನೆರವಾಗುತ್ತದೆ.
ಸ್ಥಳೀಯ ವಿನಿಮಯ ಕೇಂದ್ರಗಳ ವರದಿಯ ಪ್ರಕಾರ ಭಾರತೀಯ ಕ್ರಿಪ್ಟೋ ಹೂಡಿಕೆದಾರರ ಪೈಕಿ ಬಹಳ ಮಂದಿ ೩೫ಕ್ಕಿಂತ ಕಡಿಮೆ ವಯೋಮಾನದವರಾಗಿದ್ದಾರೆ.