• Home
  • Webinars
  • Resources
  • Projects
  • Ask the Expert
  • FAQs
  • Contact
  • About
Times Decrypt
  • Home
  • Webinars
  • Resources
  • Projects
  • Ask the Expert
  • FAQs
  • Contact
  • About

ಷೇರುಗಳು ನಿಮ್ಮ ಡಿಮ್ಯಾಟ್ ಖಾತೆಯಲ್ಲಿಘಿ...ಕ್ರಿಪ್ಟೊ ಆಸ್ತಿಗಳನ್ನು ಎಲ್ಲಿ ಇಡಬಹುದು

Times of India
Written by

Times of India, Editorial

Published: Feb 28, 2022 11:54 PM

ಕ್ರಿಪ್ಟೊ ಕರೆನ್ಸಿಗಳು ಷೇರುಗಳಂತೆ ಒಂದು ಆ್ಯಪ್ ಮೂಲಕ ತಕ್ಷಣವೇ ಖರೀದಿಸಬಹುದು. ಆದರೆ ಹೂಡಿಕೆಯ ಪ್ರಕ್ರಿಯೆಯಲ್ಲಿ ಈ ಎರಡು ಆಸ್ತಿಗಳ ನಡುವೆ ವ್ಯತ್ಯಾಸವಿದೆ. ಈಕ್ವಿಟಿ ಹೂಡಿಕೆಗಿಂತ ಕ್ರಿಪ್ಟೊ ಖರೀದಿ ಹೇಗೆ ಭಿನ್ನವಾಗಲಿದೆ? ಕ್ರಿಪ್ಟೊ ಅಥವಾ ಷೇರುಗಳಿಗೆ ಒಂದು ಸಲ ನೀವು ಆರ್ಡರ್ ಮಾಡಿದ ನಂತರ ಏನಾಗುತ್ತದೆ? ಕ್ರಿಪ್ಟೊ ವಿನಿಮಯದಿಂದ ಆಸ್ತಿ ಹಾಗೂ ಅದರ ನಿರ್ವಹಣೆ ಮತ್ತು ಲಿಕ್ವಿಡಿಟಿ ಕುರಿತ ಅಪಾಯಗಳೇನು? ನಿಮ್ಮ ಬಿಟ್ ಕಾಯಿನ್ ಅಥವಾ ಎಥೆರಿಯಂ ಅನ್ನು ಅಂತಿಮವಾಗಿ ಎಲ್ಲಿ ದಾಸ್ತಾನು ಇಡುವುದು? ಕ್ರಿಪ್ಟೊಗಳು ವಿಕೇಂದ್ರೀಕರಣವನ್ನು ಬಯಸುವುದರ ಹೊರತಾಗಿ ವಿಕೇಂದ್ರೀಕೃತ ವಿನಿಮಯ ಕೇಂದ್ರಗಳು ಹೇಗಿರುತ್ತವೆ? ಅಸೀಮ್ ಗುಜಾರ ಮತ್ತು ಪಾರ್ಥಾ ಸಿನ್ಹಾ ವಿವರಿಸುತ್ತಾರೆ...


ನಿ ೀವು ಷೇರುಗಳನ್ನು ಖರೀದಿಸುವ ಸಲುವಾಗಿ  ಡಿಮ್ಯಾಟ್ ಖಾತೆ ಇರುವ ಬ್ರೋಕಿಂಗ್ ಕಂಪನಿಯ ವೆಬ್ ಮೂಲಕ ಕ್ಲಿಕ್ಕಿಸಿದಾಗ, ಆ ಬ್ರೋಕಿಂಗ್ ಕಂಪನಿಯು ನಿಮ್ಮ ಪರವಾಗಿ ಬಿಎಸ್‌ಇ ಅಥವಾ ಎನ್‌ಎಸ್‌ಇನಲ್ಲಿ  ಆರ್ಡರ್‌ಗಳನ್ನು ಇಡುತ್ತದೆ.  ಎಕ್ಸ್‌ಚೇಂಜ್‌ಗಳು ನಂತರ ಹೊಂದಿಸಿ, ವರ್ಗಾವಣೆಯ ವಿವರಗಳನ್ನು  ಡಿಪಾಸಿಟರಿಗಳಾದ ಸಿಡಿಎಸ್‌ಎಲ್ ಅಥವಾ ಎನ್‌ಎಸ್‌ಡಿಎಲ್‌ಗೆ ಸಲ್ಲಿಸುತ್ತವೆ. ಈ ಡಿಪಾಸಿಟರೀಸ್‌ಗಳು ಷೇರುಗಳನ್ನು ನಿಮ್ಮ ಡಿಮ್ಯಾಟ್ ಖಾತೆಗೆ ಎರಡು ವಹಿವಾಟು ದಿನಗಳೊಳಗೆ ವರ್ಗಾಯಿಸುತ್ತವೆ.

ಒಂದು ಸಲ ನೀವು ಕ್ರಿಪ್ಟೊಗಳನ್ನು ಖರೀದಿಸಲು  ನೀವು ಖಾತೆ ಹೊಂದಿರುವ ವಿನಿಮಯ ಕೇಂದ್ರವು ಮಾರುಕಟ್ಟೆಯಲ್ಲಿ ಸೂಕ್ತ ಹೊಂದಾಣಿಕೆಯನ್ನು ಗುರುತಿಸುತ್ತದೆ.  ಆಸ್ತಿಯನ್ನು ಮಾರಾಟಗಾರರಿಂದ ಪಡೆದು ನಿಮ್ಮ ಪರವಾಗಿ ಸ್ಟೋರ್ ಮಾಡುತ್ತದೆ. ವರ್ಚುವಲ್ ಕರೆನ್ಸಿಗಳಲ್ಲಿ ನೀವು ಹೂಡಿಕೆ ಮಾಡಲು ಕ್ರಿಪ್ಟೊ ಎಕ್ಸ್‌ಚೇಂಜ್ ಸೆಂಟರ್‌ನಲ್ಲಿ ಖಾತೆ ಹೊಂದಿರಬೇಕು. ಕೆವೈಸಿ ವಿವರ ಸಲ್ಲಿಸಬೇಕು. ಪ್ಲಾಟ್‌ಫಾರ್ಮ್‌ನ ಬ್ಯಾಂಕ್ ಖಾತೆಯಲ್ಲಿ ರೂಪಾಯಿಗಳನ್ನು ಇಡಬೇಕು. ಆ ಬ್ಯಾಲೆನ್ಸ್ ಅನ್ನು ಬಳಸಿ ವ್ಯವಹರಿಸಬೇಕು. ನಗದೀಕರಣ ಕೂಡ ತಕ್ಷಣ ಆಗುತ್ತದೆ.

ವಿನಿಮಯ ಕೇಂದ್ರಗಳಲ್ಲಿ ಇಲ್ಲ ಏಕರೂಪತೆ:

ಹಲವಾರು ಕ್ರಿಪ್ಟೊ ವಿನಿಮಯ ಕೇಂದ್ರಗಳು ಭಾರತದಲ್ಲಿ ಬಂದಿವೆ. ಕ್ರಿಪ್ಟೊ ಆಸ್ತಿಗಳಿಗೆ ಬೇಡಿಕೆ ವೃದ್ಧಿಸಿದೆ. ಕಡಿಮೆ ಬಡ್ಡಿ ದರದ ಪರಿಸರದಲ್ಲಿ ಕ್ರಿಪ್ಟೊಗಳಲ್ಲಿ  ಹೂಡಿಕೆ ಹೆಚ್ಚುತ್ತಿದೆ. ಹೀಗಿದ್ದರೂ, ಈ ವಿನಿಮಯ ಕೆಂದ್ರಗಳಲ್ಲಿ ಕ್ರಿಪ್ಟೊ ಆಸ್ತಿಗಳ ನಿರ್ವಹಣೆ ಬಗ್ಗೆ ಏಕರೂಪದ ಪದ್ಧತಿ ಇಲ್ಲಘಿ.

ಸಾಮಾಜಿಕ ಕ್ರಿಪ್ಟೊ ವಿನಿಮಯ ಕೇಂದ್ರ ಡಿಫೈ ಸಿಇಒ ಭಾಗಬನ ಬೆಹೆರಾ ಅವರ ಪ್ರಕಾರ, ಖರೀದಿದಾರ ಮತ್ತು ಮಾರಾಟಗಾರರಿಗೆ ಒಂದೇ ವೇದಿಕೆ ಇರಬೇಕು. ಇಲ್ಲದಿದ್ದರೆ ಎಕ್ಸ್‌ಚೇಂಜ್‌ಗಳು ದೊಡ್ಡ ಎಕ್ಸ್‌ಚೇಂಜ್‌ಗಳನ್ನು ಕ್ರಿಪ್ಟೊಗಳಿಗೆ ಮೂಲವಾಗಿ ಅವಲಂಬಿಸಬೇಕಾಗುತ್ತದೆ.

ಖರೀದಿದಾರರು ಕ್ರಿಪ್ಟೊಗಳನ್ನು ವ್ಯಾಲೆಟ್‌ಗಳಲ್ಲಿ ಇಡಬಹುದು. ಆದರೆ ಕೆಲ ಎಕ್ಸ್‌ಚೇಂಜ್‌ಗಳು ಆಸ್ತಿಗಳ ಕಸ್ಟಡಿಯನ್ನು ಖರೀದಿದಾರರಿಗೆ ಬಿಟ್ಟುಕೊಡುತ್ತವೆ ಎನ್ನುತ್ತಾರೆ ಕಾಯಿನ್‌ಡಿಸಿಎಕ್ಸ್‌ನ ಸಿಒಒ ಮೃದುಲಾ ಗುಪ್ತಾಘಿ. ಹೂಡಿಕೆದಾರರ ಆಸ್ತಿಗಳನ್ನು ವಿನಿಮಯ ಕೇಂದ್ರದ ವ್ಯಾಲೆಟ್‌ನಲ್ಲಿ ದಾಸ್ತಾನು ಮಾಡಬಹುದು.

ಯಾರು ‘ಖಾಸಗಿ ಕೀಗಳನ್ನು’ ಇಡಬಹುದು?

‘ ನಿಮ್ಮ ಕೀಗಳು,  ನಿಮ್ಮ ಕ್ರಿಪ್ಟೊಗಳಲ್ಲ’ ಎಂಬ ಜನಪ್ರಿಯ ಮಾತು ಕ್ರಿಪ್ಟೊ ಬ್ಯಾಕರ್ಸ್ ವಲಯದಲ್ಲಿದೆ. ಟೋಕನ್‌ಗಳನ್ನು ಪ್ರಸ್ತಾಪಿಸಿ ಈ ಹೇಳಿಕೆ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ‘ಖಾಸಗಿ ಕೀ’ ಕ್ರಿಪ್ಟೊ ಆಸ್ತಿಯ ಮಾಲಿಕತ್ವವನ್ನು ಬಿಟ್ಟುಕೊಡುತ್ತದೆ. ಹೀಗಿದ್ದರೂ ಭಾರತದಲ್ಲಿ ಬಹುತೇಕ ಕ್ರಿಪ್ಟೊ ವಿನಿಮಯ ಕೇಂದ್ರಗಳು ಕೇಂದ್ರೀಕೃತ ವ್ಯವಸ್ಥೆಯನ್ನು ಹೊಂದಿದೆ. ಅಂದರೆ ಅವುಗಳು ಹೂಡಿಕೆದಾರರ ಪರವಾಗಿ ‘ಕೀಗಳನ್ನು’ ಹೊಂದಿರುತ್ತವೆ. ಇದು ಮಧ್ಯವರ್ತಿಗಳನ್ನು ರದ್ದುಪಡಿಸುವ ಕ್ರಿಪ್ಟೊ ಪರಿಕಲ್ಪನೆಗೆ ವಿರುದ್ಧವಾದುದು ಎನ್ನುತ್ತಾರೆ ಉದ್ಯಮದ ತಜ್ಞರು. ತ್ವರಿತ ವರ್ಗಾವಣೆಗೆ ಅನುಕೂಲವಾಗುವಂತೆ ಕೀಗಳು ಸುರಕ್ಷಿತವಾಗಿವೆ.

ನಿಯಂತ್ರಿತ ಸಂಸ್ಥೆಗಳು ಹಣಕಾಸು ಆಸ್ತಿಯನ್ನು ನಿಯಂತ್ರಿಸುವ ಬದ್ಧತೆಯನ್ನು ಹೊಂದಿರುತ್ತವೆ. ಆದರೆ ಭಾರತದಲ್ಲಿ ಕ್ರಿಪ್ಟೊ ವಿನಿಮಯ ಕೇಂದ್ರಗಳನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ನಿಯಂತ್ರಿತ ವ್ಯವಸ್ಥೆ ಇಲ್ಲಘಿ.  ಅವುಗಳ ಕಾರ್ಯಚರಣೆಗಳು ಬಿಸಿನೆಸ್ ಮಾದರಿಯನ್ನು ಅವಲಂಬಿಸಿದೆ ಎನ್ನುತ್ತಾರೆ ಕಾನೂನು ಸಂಶೋಧಕರು.

ಕ್ರಿಪ್ಟೊ ವಿನಿಮಯ ಕೇಂದ್ರ ಯುನೊಕಾಯಿನ ನ ಸಿಇಒ ಸಾತ್ವಿಕ್ ವಿಶ್ವನಾಥ್ ಅವರ ಪ್ರಕಾರ, ಅವರ ಗ್ರಾಹಕರು ತಮ್ಮ ಬಳಿ ಇಲ್ಲವೇ ಅವರ ಪ್ಲಾಟ್‌ಫಾರ್ಮ್ ಬಳಿ ಕ್ರಿಪ್ಟೊಗಳನ್ನು ಇಟ್ಟುಕೊಳ್ಳಬಹುದು.

ಹ್ಯಾಕಿಂಗ್, ಡೇಟಾ ರಕ್ಷಣೆಯ ಕಳವಳ:

ಜಾಣ್ಮೆಯ ಹೂಡಿಕೆದಾರರು ಕ್ರಿಪ್ಟೊ ಆಸ್ತಿಗಳ ಕಸ್ಟಡಿಯನ್ನು ವಿಕೇಂದ್ರೀಕರಿಸಲು ಬಯಸುತ್ತಾರೆ. ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹ್ಯಾಕಿಂಗ್ ಆಗುವ ಕಳವಳ ಅವರಲ್ಲಿದೆ.

ಕೇಂದ್ರೀಕೃತ ಎಕ್ಸ್‌ಚೇಂಜ್‌ಗಳು ತಂತ್ರಜ್ಞಾನ ಪರಿಣತಿ ಇಲ್ಲದವರಿಗೆ ಬಳಸಲು ಅನುಕೂಲಕರವಾದರೂ, ಅವುಗಳ ಮೇಲಿನ ಅತಿಯಾದ ಅವಲಂಬನೆಯಿಂದ ಕ್ರಿಪ್ಟೊಗಳ ಮೂಲಭೂತ ಅಂಶಗಳಿಂದ ಜನರನ್ನು ದೂರವಿಡುತ್ತದೆ ಎನ್ನುತ್ತಾರೆ ರೆಡಿಟ್ ಫೋರಮ್ ಕ್ರಿಪ್ಟೊ ಇಂಡಿಯಾದ ತಜ್ಞರು. ಇದು ಇತ್ತೀಚೆಗೆ ಯುನೊಕಾಯಿನ್‌ನ ವಿಶ್ವನಾಥ್ ಅವರೊಂದಿಗೆ ಸಂವಾದ ನಡೆಸಿತ್ತುಘಿ.

ಕ್ರಿಪ್ಟೊ ವ್ಯವಹಾರಕ್ಕೆ ಸಂಬಂಸಿ ಎಲ್ಲ ವಹಿವಾಟುಗಳಿಗೆ ನಿಯಂತ್ರಣದ ಅಗತ್ಯ ಬರಬಹುದು. ಪರವಾನಗಿ ಹೊಂದಿರುವ ವಿನಿಮಯ ಕೇಂದ್ರಗಳ ಮೂಲಕ ಮಾತ್ರ ವಹಿವಾಟು ನಡೆಸಬೇಕು  ಮತ್ತು ಕೆವೈಸಿ ಮತ್ತಿತರ ಪ್ರಕ್ರಿಯೆ ಕಡ್ಡಾಯವಾಗಬಹುದು ಎನ್ನುತ್ತಾರೆ ಶಾರ್ದೂಲ್ ಅಮರ್ ಚಂದ್ ಮಂಗಲ್‌ದಾಸ್  ಪಾಲುದಾರರಾದ ಶಿಲ್ಪಾ ಮಾನ್‌ಕರ್  ಅಹ್ಲುವಾಲಿಯಾ.

 ಕ್ರಿಪ್ಟೊ ಆಡಿಟ್ ಸಂಸ್ಥೆ ಕ್ಯಾಟಕ್ಸ್‌ನ ಸ್ಥಾಪಕ ಗೌರವ್ ಮೆಹ್ತಾಘಿ, ‘ನಿಯಂತ್ರಣದ ನಂತರ ಎಕ್ಸ್‌ಚೇಂಜ್‌ಗಳು  ದರ ಸಂಶೋಧನೆಗಳಿಗೆ, ರಿಸ್ಕ್ ನಿರ್ವಹಣೆಗೆ ಪ್ರಾಶಸ್ತ್ಯ  ನೀಡಬಹುದು ಎನ್ನುತ್ತಾರೆ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ www.TimesDecrypt.com

ಇದನ್ನು ಗಮನಿಸಿ: ಷೇರುಗಳು ವರ್ಸಸ್ ಟೋಕನ್‌ಗಳು ಈಕ್ವಿಟಿ ಪ್ಲೇ

⮚  ನೀವು ಷೇರುಗಳನ್ನು ಖರೀದಿಸುವಾಗ ಕನಿಷ್ಠ ೩ ವಿಷಯಗಳು ಇರುತ್ತವೆ. ಬ್ರೋಕರ್, ವಿನಿಮಯ ಕೇಂದ್ರ ಮತ್ತು ಡಿಪಾಸಿಟರಿ.

⮚ ಅವರ ಕೆಲಸ ಕಾರ್ಯಗಳನ್ನು ಸೆಬಿ ನಿಯಂತ್ರಿಸುತ್ತದೆ.

⮚ ನೀವು ಖರೀದಿಸುವ ಷೇರುಗಳನ್ನು ಡಿಮ್ಯಾಟ್ ಖಾತೆಯಲ್ಲಿ ಇಡಬಹುದು.


ನಿಮ್ಮ ಕಾಯಿನ್ ಬಗ್ಗೆ ಮುಖ್ಯಾಂಶಗಳು:

⮚   ವಿನಿಮಯ ಕೇಂದ್ರಗಳ ನಡುವೆ ಏಕರೂಪತೆ ಇರುವುದಿಲ್ಲಘಿ. ನಿಯಂತ್ರಕ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ.

⮚  ಬಹುತೇಕ ಭಾರತೀಯ ವಿನಿಮಯ ಕೇಂದ್ರಗಳು ‘ಕೇಂದ್ರೀಕೃತ’ವಾಗಿವೆ. ಅಂದರೆ ಅವುಗಳು ‘ಕೀ’ಗಳಾಗಿದ್ದುಘಿ, ತ್ವರಿತ ವರ್ಗಾವಣೆಗಳಿಗೆ ಸಹಕಾರಿಯಾಗಿವೆ.

⮚  ಜಾಣ್ಮೆಯ ಹೂಡಿಕೆದಾರರು ವಿನಿಮಯ ಕೇಂದ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.  ಅವುಗಳು ತಮ್ಮ ಆಸ್ತಿಗಳನ್ನು ರಕ್ಷಿಸುವ ಸಾಮರ್ಥ್ಯ ಹೊಂದಿವೆಯೇ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೆ.


ಹಲವಾರು ಕ್ರಿಪ್ಟೊ ವಿನಿಮಯ ಕೇಂದ್ರಗಳು ವ್ಯಾಲೆಟ್ ಸೇವೆಯನ್ನು ಒದಗಿಸುತ್ತವೆ. ಆದರೆ ಸಂಪೂರ್ಣ ನಿಯಂತ್ರಣವನ್ನು ವರ್ಗಾಯಿಸುವುದಿಲ್ಲಘಿ. ವ್ಯಾವಹಾರಿಕ ಅನುಕೂಲಕ್ಕಾಗಿ ಎಕ್ಸ್‌ಚೇಂಜ್‌ಗಳು ಗ್ರಾಹಕರ ಪರವಾಗಿ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡಿರಬಹುದು.

- ಶಿಲ್ಪಾ ಮಾನ್‌ಕರ್ ಅಹ್ಲುವಾಲಿಯಾ

ಪಾಲುದಾರರು, ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್

#kannada

Share the article on:

  • Facebook
  • Twitter
  • LinkedIn
  • WhatsApp

Related articles

  • ಕ್ರಿಪ್ಟೊ ಬಗ್ಗೆ ಬಹುತೇಕ ರಾಷ್ಟ್ರಗಳಿಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇಕೆ
  • ಭಾರತದಲ್ಲಿ ಕ್ರಿಪ್ಟೊ ವಹಿವಾಟು ಕಾನೂನು ಬಾಹಿರವಲ್ಲ
  • ಕ್ರಿಪ್ಟೊ ಸಂಪೂರ್ಣ ನಿಷೇಧಕ್ಕೆ ಆರ್‌ಬಿಐ ಒಲವು, ತಜ್ಞರ ಆಕ್ಷೇಪ
  • ತೆರಿಗೆ ಮತ್ತು ವಿಧಾನ: ಕ್ರಿಪ್ಟೊ ಹೂಡಿಕೆದಾರರಿಗೆ ಬಜೆಟ್ ಹೇಗೆ ಮಿಶ್ರ ಫಲ
  • ಅಪಾಯದ ಹೊರತಾಗಿಯೂ ಯುವ ಹೂಡಿಕೆದಾರರನ್ನು ಸೆಳೆಯುತ್ತಿರುವ ಕ್ರಿಪ್ಟೋ ಟೆಕ್ ಬ್ಲಾಕ್‌ಚೈನ್

Top categories

  • Crypto NEWS
  • Cryptocurrency
  • Blockchain
  • Economic
  • Legal

Read in your language

  • Bengali
  • Gujarati
  • Hindi
  • Kannada
  • Marathi

Stay up to date

Subscribe to our newsletter

Resources

  • Blockchain
  • Cryptocurrency
  • Legal
  • Crypto NEWS
  • Featured Videos

Important links

  • Ask an Expert
  • Webinars
  • About
  • Resources
  • Contact

Follow us

Catch the exclusive Times Decrypt coverage in TOI newspaper every Wednesday.

To start the doorstep delivery of your copy of TOI, visit subscribe.timesgroup.com

© Times Decrypt - All rights reserved. Powered by Leo Digital