ಹಿತೇನ್ ಮಾಳವೀಯ (29) 2016ರಲ್ಲಿ ಮೊದಲ ಬಾರಿಗೆ ಬಿಟ್ ಕಾಯಿನ್ ಖರೀದಿಸಿದಾಗ ಈ ಪರೋಕ್ಷ ಕರೆನ್ಸಿಯ ವೌಲ್ಯ 1000ಡಾಲರ್‌ಗಳಿಗೂ ಕಡಿಮೆ ಇತ್ತು. ರೂ.40,000ಗಳ ಆರಂಭಿಕ ಹೂಡಿಕೆ ಮಾಡಿದ ನಂತರ ಒಂದೇ ವರ್ಷದಲ್ಲಿ ಮಾಳವೀಯ ಕ್ರಿಪ್ಟೋ ಮಿಲಿಯನೇರ್ ಆದರು. ಏಕೆಂದರೆ 2017ರ ಅಂತ್ಯಕ್ಕೆ ಬಿಟ್ ಕಾಯಿನ್ ಬೆಲೆ 20,000 ಡಾಲರ್‌ಗಳಿಗೆ ಏರಿತ್ತು.
ಆದರೆ, 2018ರಲ್ಲಿ ಮಾಳವೀಯ ತಮ್ಮ ಹೂಡಿಕೆಯ ಶೇ.80 ಕಳೆದುಕೊಂಡರು. ಏಕೆಂದರೆ ಬಿಟ್ ಕಾಯಿನ್‌ನ ಬೆಲೆ 3000 ಡಾಲರ್‌ಗಳಿಗೆ ಕುಸಿತ ಕಂಡಿತ್ತು. ಬ್ಯಾಂಕುಗಳು ಕ್ರಿಪ್ಟೋ ವ್ಯವಹಾರ ಮಾಡದಂತೆ ಆರ್‌ಬಿಐ ನಿಷೇಧಿಸಿದ್ದರಿಂದ ಮಾಳವೀಯರವರು ತಮ್ಮ ಸ್ವತ್ತನ್ನು ಮುಟ್ಟಲೂ ಅಸಾಧ್ಯವಾಗಿತ್ತು. ಅದು ಆರ್ಥಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ಸಂಕಷ್ಟ ಸ್ಥಿತಿಯಾಗಿತ್ತು ಎಂದು ಅವರು ಹೇಳುತ್ತಾರೆ. ಆಗ ಕ್ರಿಪ್ಟೋ ಕಾನೂನುಬಾಹಿರವಾಗಿತ್ತು.
ಕ್ರಿಪ್ಟೋ ಈಗಲೂ ಕಾನೂನಾತ್ಮಕವಾಗಿ ಪೂರ್ತಿ ಸ್ವಚ್ಛವಾಗಿ ಹೊರ ಬಂದಿಲ್ಲ. ಆದರೆ, ಹಲವಾರು ಬಿಕ್ಕಟ್ಟಿನ ಸಂದರ್ಭದಲ್ಲೂ ಬಹು ವಿಧವಾಗಿ ಆದಾಯ ಗಳಿಸಬಲ್ಲ ಸಾಧನವಾಗಿ ಇದರ ವ್ಯಾಪ್ತಿ ಈಗ ವಿಶಾಲವಾಗಿದ್ದು, ಈ ಅತ್ಯಂತ ಚಲನಶೀಲ ಡಿಜಿಟಲ್ ಕರೆನ್ಸಿ ಭಾರತೀಯರನ್ನು ಆಕರ್ಷಿಸುತ್ತಿವೆ. ರಾಯಿಟರ್ಸ್ ಪ್ರಕಾರ 15 ಮಿಲಿಯನ್ ಭಾರತೀಯರು ಕ್ರಿಪ್ಟೋ ಸಂಪತ್ತನ್ನು ಹೊಂದಿದ್ದಾರೆ. ವದ್ಧಿಸುತ್ತಿರುವ ಕ್ರಿಪ್ಟೋನ ಜನಪ್ರಿಯತೆ, ಈ ವರ್ಷಾರಂಭದಿಂದ ನೀತಿ ಶಾಸನ ರೂಪಿಸುವವರ ಗಮನ ಅದರತ್ತ ಹರಿದಿದೆ. ಕಳೆದ ತಿಂಗಳು ಸರಕಾರವು ಖಾಸಗಿ ಕ್ರಿಪ್ಟೋ ಕರೆನ್ಸಿ ನಿಷೇಧಿಸುವ ವಿಧೇಯಕ ಜಾರಿಗೊಳಿಸುವ ಆದರೆ ತಂತ್ರಜ್ಞಾನ ಅಭಿವೃದ್ಧಿಯ ದೃಷ್ಟಿಯಿಂದ ಕೆಲವೊಂದು ವಿನಾಯಿತಿ ನೀಡುವ ಇಂಗಿತ ವ್ಯಕ್ತಪಡಿಸಿತ್ತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರು ಆತಂಕಿತರಾಗಿದ್ದುಘಿ, ಕ್ರಿಪ್ಟೋ ಕರೆನ್ಸಿಗಳ ಬಹತ್ ಪ್ರಮಾಣದ ಮಾರಾಟ ಶುರುವಾಗಿದೆ. ಕ್ರಿಪ್ಟೊ ಎಕ್ಸ್‌ಚೇಂಜ್ ವಜೀರ್‌ಎಕ್ಸ್ ನ ಸಿಇಓ ನಿಶ್ಚಲ್ ಶೆಟ್ಟಿ , ‘‘ಭಾರತೀಯ ಮಾರುಕಟ್ಟೆಯಲ್ಲಿ ಜಾಗತಿಕ ಮಾರುಕಟ್ಟೆಗಿಂತ 15-20% ರಿಯಾಯಿತಿ ಬೆಲೆಯಲ್ಲಿ ಕ್ರಿಪ್ಟೋ ಕರೆನ್ಸಿಗಳು ಮಾರಾಟವಾಗುತ್ತಿದೆ. ಕಳೆದ ಜನವರಿಯಲ್ಲಿ ಸರಕಾರ ಹೇಳಿರುವಂತೆಯೇ ವಿಧೇಯಕದ ಸ್ವರೂಪ ಮುಂದುವರಿಯು ಸಾಧ್ಯತೆಯಿದ್ದುಘಿ, ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ’’ ಎಂದು ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಗುರುವಾರ ಮುಕ್ತಾಯಗೊಳ್ಳಲಿದ್ದು, ವಿಧೇಯಕ ಮಂಡನೆಯ ಬಗ್ಗೆ ಇನ್ನೂ ಯಾವುದೇ ಸುದ್ದಿಯಿಲ್ಲ. ಕಳೆದ ವಾರ ಆರ್‌ಬಿಐ ಭಾಗಶಃ ನಿರ್ಬಂಧಗಳು ಕಾರ್ಯ ಸಾಧುವಲ್ಲದ್ದರಿಂದ ಪೂರ್ಣ ಕ್ರಿಪ್ಟೋ ನಿಷೇಧ ಅಗತ್ಯವೆಂದು ತನ್ನ ಮಂಡಳಿಗೆ ತಿಳಿಸಿದೆ. ಇದರಿಂದ ಹೂಡಿಕೆದಾರರ ಆತಂಕ ಹೆಚ್ಚಿದೆ.
‘‘ಯೂನಿಕಾರ್ನ್ ನವೋದ್ಯಮಗಳಿಂದ ಕೂಡಿದ ದೇಶೀಯ ಕ್ರಿಪ್ಟೋ ಉದ್ಯಮವು ಸರಕಾರ ದೊಂದಿಗೆ ಮಾತುಕತೆ ನಡೆಸುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ನವೆಂಬರ್‌ನಲ್ಲಿ ಸಂಸತ್‌ನಲ್ಲಿ ನೀಡಿದ ಹೇಳಿಕೆಯನ್ವಯ ಬಿಟ್ ಕಾಯಿನ್‌ನ್ನು ಕರೆನ್ಸಿ ಎಂದು ಪರಿಗಣಿಸುವ ಪ್ರಸ್ತಾಪ ಇಲ್ಲ ಎಂಬುದು ಉದ್ಯಮದ ಬೇಡಿಕೆಗಳಿಗೆ ಅನುಗುಣವಾಗಿದೆ. ಕ್ರಿಪ್ಟೊವನ್ನು ಒಂದು ಸ್ವತ್ತು (ಆಸ್ತಿ) ಎಂದು ಪರಿಗಣಿಸಬೇಕು. ಇತರೆ ದೇಶಗಳಲ್ಲೂ ಇದೇ ಪ್ರಕಾರ ಪರಿಗಣಿಸಲಾಗುತ್ತಿದೆ. ಕ್ರಿಪ್ಟೋ ಬಳಕೆಯು ಬಹುತೇಕರ ಪ್ರಕಾರ ಇದು ಒಂದು ಹೂಡಿಕೆಯೇ ವಿನಃ ಪಾವತಿಯಲ್ಲ’’ ಎಂದು ಉದ್ಯಮ ವಲಯದ ಮಂಡಳಿಯಾದ ಬಿಎಸಿಸಿಯ ಸಹ ಅಧ್ಯಕ್ಷ ಆಶಿಷ್ ಸಿಂಘಾಲ್ ಹೇಳಿದ್ದಾರೆ.
ಕ್ರಿಪ್ಟೋ ಎಕ್ಸ್‌ಚೇಂಜ್ ಬೈಯುಕಾಯಿನ್ಸ್ ಸಿಇಓ ಶಿವಂ ಟಕ್ರಾಲ್ ಹೇಳುವಂತೆ ‘‘ಉದ್ಯಮ ಕ್ರಿಪ್ಟೋವನ್ನು ಯಾವುದೇ ಬಗೆಯ ಕಾನೂನುಬದ್ಧ ಪಾವತಿ ಎಂದು ವಿರೋಧಭಾಸವಾಗಿಯೇ ಗುರುತಿಸುತ್ತದೆ’’. ಸರ್ಕಾರ ಮತ್ತು ಆರ್‌ಬಿಐ ಖಾಸಗಿಯಾಗಿ ಹೊರಡಿಸಿದ ಕರೆನ್ಸಿಗಳನ್ನು ಸ್ವೀಕರಿಸಲು ಸಮ್ಮತಿಸಲು ಒಪ್ಪಿಕೊಳ್ಳುತ್ತಿಲ್ಲ. ಕಾರಣ ಇವುಗಳಿಗೆ ಯಾವುದೇ ಖಾತರಿ ಅಥವಾ ಸರಕುಗಳಿಂದ ಬೆಂಬಲ ಇರುವು ದಿಲ್ಲ. ಸರ್ಕಾರದ ಪ್ರಕಾರ ಖಾಸಗಿ ಕ್ರಿಪ್ಟೋದ ಪರಿಭಾಷೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಮಸೂದೆಯನ್ನು ಗಂಭೀರವಾಗಿ ಕಾದು ನೋಡಬೇಕಿದೆ.
ಕ್ರಿಪ್ಟೋ ಕುರಿತ ಹೆಚ್ಚಿನ ಮಾಹಿತಿಗೆ www.TimesDecrypt.com ನೋಡಿ
ಕ್ರಿಪ್ಟೋ ಗಮನಸೆಳೆಯುತ್ತಿರುವುದೇಕೆ?
⮚ ಕ್ರಿಪ್ಟೋವನ್ನು ಯಾವುದೇ ಸಂಸ್ಥೆಯಿಂದ ನೀಡಲಾಗುವುದಿಲ್ಲ ಮತ್ತು ಯಾವುದೇ ಖಾತರಿಯೊಂದಿಗೆ ಬೆಂಬಲಿಸುವುದಿಲ್ಲ ವಾದ್ದರಿಂದ, ಇದನ್ನು ಹಣಕಾಸು ವ್ಯವಸ್ಥೆಗೆ ಅಪಾಯವೆಂದು ಪರಿಗಣಿಸಲಾಗುತ್ತದೆ.
⮚ ಕ್ರಿಪ್ಟೋ ಸಾಗರೋತ್ತರ ಅನಾಮಧೇಯ ವಹಿವಾಟುಗಳನ್ನು ಸಕ್ರಿಯಗೊಳಿಸುವುದ ರಿಂದ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಇತ್ಯಾದಿ ದುರ್ಬಳಕೆ ಬಗ್ಗೆ ಸರಕಾರ ಪರಿಶೀಲಿಸಿದೆ. ‘ಆಸ್ತಿ’ಯ ಮಾನ್ಯತೆ ನೀಡಲು ಬೇಡಿಕೆ
⮚ ಸ್ಥಳೀಯ ಕ್ರಿಪ್ಟೋ ಉದ್ಯಮ ಕ್ರಿಪ್ಟೋವನ್ನು ಕರೆನ್ಸಿಯಾಗಿ ನಿಷೇಧಿಸಲು ಬೆಂಬಲಿಸಿದೆ. ಇದು ವಿತ್ತೀಯ ನೀತಿ ಮತ್ತು ಹಣಕಾಸಿನ ನಿಯಂತ್ರಣಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ⮚ ಆದರೆ ಕ್ರಿಪ್ಟೋವನ್ನು ಆಸ್ತಿಯಾಗಿ ಮಾತ್ರ ಬಳಸಲು ಬೆಂಬಲಿಸಿದೆ. ನಿಯಂತ್ರಕ ವ್ಯವಸ್ಥೆ ಹೂಡಿಕೆದಾರರನ್ನು ರಕ್ಷಿಸುತ್ತದೆ, ಉತ್ತಮ ತೆರಿಗೆ ಸಂಗ್ರಹಕ್ಕೆ ಕೂಡ ಕಾರಣವಾಗುತ್ತದೆ ಮತ್ತು ಅಕ್ರಮ ಬಳಕೆಯನ್ನು ಮಿತಿಗೊಳಿಸುತ್ತದೆ ಎಂದು ಉದ್ಯಮ ಹೇಳುತ್ತದೆ.