• Home
  • Webinars
  • Resources
  • Projects
  • Ask the Expert
  • FAQs
  • Contact
  • About
Times Decrypt
  • Home
  • Webinars
  • Resources
  • Projects
  • Ask the Expert
  • FAQs
  • Contact
  • About

ನೀತಿ, ಕಾನೂನು ಸಮಸ್ಯೆಗಳ ಹೊರತಾಗಿಯೂ ಕ್ರಿಪ್ಟೊ ಸ್ಟಾರ್ಟಪ್‌ಗಳಲ್ಲಿ ಹೂಡಿಕೆಯ ಹೆಚ್ಚಳ ಏಕೆ

Published: Feb 28, 2022 11:56 PM

ಕಾನೂನು ಮತ್ತು ನೀತಿಯ ವಿಚಾರಗಳಲ್ಲಿ ಅನಿಶ್ಚಿತತೆಯ ಹೊರತಾಗಿಯೂ ೨೦೨೧ರಲ್ಲಿ ದಾಖಲೆಯ ಎತ್ತರದ ಮಟ್ಟದಲ್ಲಿ ಕ್ರಿಪ್ಟೊ ಉದ್ದಿಮೆಗಳಲ್ಲಿ ಜಾಗತಿಕ 

ಮತ್ತು ದೇಶಿ ಹೂಡಿಕೆಯ ಪ್ರಮಾಣ ಹರಿದು ಬಂದಿದೆ. ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್ ಪಾಲಿಗಾನ್, ಇತ್ತೀಚೆಗೆ ೪೫೦ ದಶಲಕ್ಷ ಡಾಲರ್ ಹೂಡಿಕೆಯನ್ನು ಗಳಿಸಿದೆ. ಕಳೆದ ಎರಡು ವರ್ಷಗಳಲ್ಲಿ ಈ ಪರಿಯಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಿರುವುದು ಹೇಗೆ? ಭಾರತದಲ್ಲಿ ಕ್ರಿಪ್ಟೊ ನೀತಿಗಳಿಗೆ ಸಂಬಂಸಿ ಅನಿಶ್ಚಿತತೆಯ ಹೊರತಾಗಿಯೂ, ಹೂಡಿಕೆ ಮಾಡುತ್ತಿರುವ ಖಾಸಗಿ ಈಕ್ವಿಟಿ ಮತ್ತು ವೆಂಚರ್ ಕ್ಯಾಪಿಟಲ್ ಹೂಡಿಕೆದಾರರ ಹಿಂದಿರುವ ಕಾರ್ಯತಂತ್ರಗಳೇನು?ಅಸೀಮ್ ಗುಜಾರ ಮತ್ತು ಪಾರ್ಥಾ ಸಿನ್ಹಾ ವಿವರಿಸುತ್ತಾರೆ...


ಕ್ರಿ ಪ್ಟೊ ಕಂಪನಿಗಳು ಮೊಟ್ಟ ಮೊದಲ ಬಾರಿಗೆ ಸೂಪರ್ ಬೌಲ್ ಕ್ರೀಡಾಕೂಟಕ್ಕೆ ಲಕ್ಷಾಂತರ ಡಾಲರ್ ಹಣವನ್ನು ಜಾಹೀರಾತಿಗೋಸ್ಕರ ಖರ್ಚು ಮಾಡಿವೆ. ಈ ಜಾಹೀರಾತುಗಳು ಕಳೆದ ವಾರ ೧೦೦ ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಕರನ್ನು ಕಳೆದ ಭಾನುವಾರ ಆಕರ್ಷಿಸಿತ್ತುಘಿ. ಅಮೆರಿಕದ ಹಾಸ್ಯ ಕಲಾವಿದ ಲಾರ್ರಿ ಡೇವಿಡ್ ಅವರನ್ನು ಒಳಗೊಂಡಿರುವ ಜಾಹೀರಾತು ವೈರಲ್ ಆಗಿತ್ತುಘಿ. ಲಾರ್ರಿ ಡೇವಿಡ್ ಅವರು ‘ಕರ್ಬ್ ಯುವರ್ ಎಂತೂಸಿಯಾಸಮ್’  ಟಿವಿ ಸರಣಿ ಕಾರ್ಯಕ್ರಮದ ರೂವಾರಿಗಳಾಗಿದ್ದಾರೆ. ಇತಿಹಾಸದ ಪ್ರಮುಖ ವಿದ್ಯಮಾನಗಳಿಗೆ ಸಂಬಂಸಿ ಪ್ರಶ್ನಾರ್ಹ ವ್ಯಕ್ತಿಗಳ ಬಗ್ಗೆಯೂ ಇದರಲ್ಲಿ ಬೆಳಕು ಚೆಲ್ಲಲಾಗುತ್ತಿದೆ. ಕಾರ್ಯಕ್ರಮದಲ್ಲಿ ಬಲ್ಬಿನ ಸಂಶೋಧನೆ ಮತ್ತು ಚಂದ್ರನ ಮೇಲೆ ಮಾನವ ಇಳಿದ ಘಟನೆಯನ್ನು ಹಾಸ್ಯದಲ್ಲಿ ಪ್ರಸ್ತಾಪಿಸುವ ಡೇವಿಡ್, ಇದಾದ ನಂತರ ಕ್ರಿಪ್ಟೊಗಳಿಂದ ಮಾಡುವುದು ಏನೂ ಇಲ್ಲ ಎನ್ನುತ್ತಾರೆ. ಆದರೆ ಜಾಹೀರಾತುದಾರ ಎಫ್‌ಟಿಎಕ್ಸ್ ಟ್ರೇಡಿಂಗ್,

‘‘ಲಾರ್ರಿಯವರಂತೆ ಹತಾಶರಾಗದಿರಿ, ಕ್ರಿಪ್ಟೊವನ್ನು ಕಳೆದುಕೊಳ್ಳದಿರಿ’’ ಎಂಬ ಸಂದೇಶ ತಿಳಿಸುತ್ತದೆ.

ಹೂಡಿಕೆದಾರರು ಆಸಕ್ತಿಯುತವಾದದ್ದನ್ನು ಕಳೆದುಕೊಳ್ಳಲು ಬಯಸದಿರುವುದರಿಂದಲೋ, ಅಥವಾ ಕ್ರಿಪ್ಟೊದ ಸಾಧ್ಯತೆಗಳನ್ನು ಗ್ರಹಿಸಿಯೋ ಭಾರತೀಯ ಮೂಲದ ಕ್ರಿಪ್ಟೊ, ಬ್ಲಾಕ್‌ಚೈನ್ ಆಧಾರಿತ ಸ್ಟಾರ್ಟಪ್‌ಗಳಲ್ಲಿ ಭಾರಿ ಹೂಡಿಕೆ ಮಾಡುತ್ತಿದ್ದಾರೆ. ನೀತಿ ಮತ್ತು ಕಾನೂನುಗಳ ಅನಿಶ್ಚಿತತೆಯ ಹೊರತಾಗಿಯೂ ಹೂಡಿಕೆಯನ್ನು ಮುಂದುವರಿಸಿದ್ದಾರೆ.ಕ್ರಿಪ್ಟೊ ಕರೆನ್ಸಿ ಮತ್ತು ಬ್ಲಾಕ್‌ಚೈನ್ ಸ್ಟಾರ್ಟಪ್‌ಗಳು ೨೦೨೧ರಲ್ಲಿ ದಾಖಲೆಯ ೫೨೪ ದಶಲಕ್ಷ ಡಾಲರ್ ಹೂಡಿಕೆಯನ್ನು ಸಂಗ್ರಹಿಸಿವೆ. ೨೦೧೯ರಲ್ಲಿ ಕೇವಲ ೫.೫ ದಶಲಕ್ಷ ಡಾಲರ್ ಹೂಡಿಕೆಯನ್ನು ಗಳಿಸಿತ್ತುಘಿ. ಈ ವರ್ಷ ಉತ್ತಮ ಹೂಡಿಕೆಯ ಆರಂಭ ಕಂಡು ಬಂದಿದೆ. ಈ ವರ್ಷ ಫೆಬ್ರವರಿ ಮಧ್ಯ ಭಾಗದ ತನಕ ಒಟ್ಟು ೪೫೯ ದಶಲಕ್ಷ ಡಾಲರ್ ಹೂಡಿಕೆಯಲ್ಲಿ ಪಾಲಿಗಾನ್ ೪೫೦ ದಶಲಕ್ಷ ಡಾಲರ್ ಹೂಡಿಕೆಯನ್ನು ಗಳಿಸಿದೆ. ಗ್ರಾಹಕರ ಬೆಳವಣಿಗೆ

ಬಿಟ್‌ಕಾಯಿನ್, ಈಥರ್ ಮುಂತಾದ ವರ್ಚುವಲ್ ಆಸ್ತಿಗಳು, ಭಾರತೀಯ ಕ್ರಿಪ್ಟೊ ಸ್ಟಾರ್ಟಪ್‌ಗಳಲ್ಲಿ ವೈಯಕ್ತಿಕ ಮತ್ತು ಸಾಂಸ್ಥಿಕ ಹೂಡಿಕೆಗಳಲ್ಲಿ ಸಾಮಾನ್ಯ ಅಂಶವೊಂದು ಇರುತ್ತದೆ. ಅಕ ಅಪಾಯ, ಅಕ ಪ್ರತಿಫಲ. ಕಳೆದ ಎರಡು ವರ್ಷಗಳಲ್ಲಿ  ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ ಸ್ಟಾರ್ಟಪ್‌ಗಳಲ್ಲಿ ಖಾಸಗಿ ಈಕ್ವಿಟಿ (ಪಿಇ) ಮತ್ತು ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆಗಳು  ಹೆಚ್ಚಲು, ಗ್ರಾಹಕರ ಸಂಖ್ಯೆಯಲ್ಲಿ ಉಂಟಾಗಿರುವ ಏರಿಕೆಯೂ ಕಾರಣವಾಗಿದೆ.

‘‘ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಕ್ರಿಪ್ಟೊ ವಲಯದಲ್ಲಿ ಗ್ರಾಹಕರ ಸಂಖ್ಯೆ ೩ ದಶಲಕ್ಷದಿಂದ ೨೦ ದಶಲಕ್ಷಕ್ಕೆ ಏರಿಕೆಯಾಗಿದೆ’’ ಎನ್ನುತ್ತಾರೆ ಕ್ರಿಪ್ಟೊ ಹೂಡಿಕೆ ಪ್ಲಾಟ್‌ಫಾರ್ಮ್ ವಾಲ್ಡ್‌ನ ಸಿಇಒ ಮತ್ತು ಸಹ ಸಂಸ್ಥಾಪಕ ದರ್ಶನ್ ಬಾತಿಜಾ ಅವರು. ೨೦೨೦ರಿಂದ  ಈ ಸ್ಟಾರ್ಟಪ್ ೨೮ ದಶಲಕ್ಷ ಡಾಲರ್ ಹೂಡಿಕೆಯನ್ನು ಗಳಿಸಿದೆ ಎಂದು ಟ್ರ್ಯಾಕರ್ ಟ್ರಾಕ್ಸನ್, ಟಿಒಐಗೆ ತಿಳಿಸಿದೆ.

ಸುಪ್ರಿಂಕೋರ್ಟ್ ೨೦೨೦ರ ಮಾರ್ಚ್‌ನಲ್ಲಿ ನೀಡಿದ ಆದೇಶದಲ್ಲಿಘಿ, ಆರ್‌ಬಿಐ ಕ್ರಿಪ್ಟೊ ವಹಿವಾಟಿನ ಮೇಲೆ ವಿಸಿದ್ದ ನಿಷೇಧವನ್ನು ತೆರವುಗೊಳಿಸಿತ್ತುಘಿ. ಇದು ಸ್ಟಾರ್ಟಪ್‌ಗಳಿಗೆ ಮಹತ್ವದ ತಿರುವು ಎನ್ನಿಸಿತ್ತುಘಿ. ವೆಂಚರ್ ಕ್ಯಾಪಿಟಲ್ ಹೂಡಿಕೆದಾರರು ವ್ಯಾಪಕವಾಗಿ ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿದರು ಎನ್ನುತ್ತಾರೆ ಬ್ಲಾಕ್‌ಚೈನ ಆ್ಯಂಡ್ ಕ್ರಿಪ್ಟೊ ಟು ಅಸೆಟ್ಸ್ ಕೌನ್ಸಿಲ್‌ನ (ಬಿಎಸಿಸಿ)  ಸಹ ಅಧ್ಯಕ್ಷ ಮತ್ತು ಕ್ರಿಪ್ಟೊ ಎಕ್ಸ್‌ಚೇಂಜ್ ಕಾಯಿನ್‌ಸ್ವಿಚ್‌ನ ಸ್ಥಾಪಕ ಮತ್ತು ಸಿಇಒ ಆಗಿರುವ ಆಶೀಷ್ ಸಿಂಘಾಲ್ ಅವರು.

೨೦೨೧ರಲ್ಲಿ ಸ್ಟಾರ್ಟಪ್‌ಗಳಿಗೆ ನೇರವಾಗಿ ಆಗಿರುವ ೫೨೪ ದಶಲಕ್ಷ ಡಾಲರ್ ಹೂಡಿಕೆಯಲ್ಲಿ ಶೇ.೮೩ ಪಾಲು ಕ್ರಿಪ್ಟೊ ಆಧಾರಿತ ಸ್ಟಾರ್ಟಪ್‌ಗಳ ಪಾಲಾಗಿದೆ. ಕಾಯಿನ್ ಡಿಸಿಎಕ್ಸ್‌ಘಿ, ಕಾಯಿನ್‌ಸ್ವಿಚ್, ವಾಲ್ಡ್‌ಗೆ ಬಂದಿದೆ. ಪಾಲಿಗಾನ್ ೪೫೦ ದಶಲಕ್ಷ ಡಾಲರ್ ಹೂಡಿಕೆಯನ್ನು ಆಕರ್ಷಿಸಿದೆ. ಇದು ಎಥೆರಿಯಂ ಬ್ಲಾಕ್ ಚೈನ್ ಅನ್ನು ವ್ಯವಸ್ಥೆಗೊಳಿಸಿದೆ. ಎಥೆರ್  ಎರಡನೇ ಅತಿ ದೊಡ್ಡ ಕ್ರಿಪ್ಟೊ ಕರೆನ್ಸಿಯಾಗಿದ್ದುಘಿ, ನಾನ್-ಫಂಜಿಬೆಲ್ ಟೋಕನ್‌ಗಳನ್ನು (ಎನ್‌ಎಫ್‌ಟಿ) ಹೊಂದಿದೆ.

ಕ್ರಿಪ್ಟೊ ವಲಯದಲ್ಲಿ ಹೂಡಿಕೆಗೆ ಆಕರ್ಷಣೆಯಾಗುವ ಹಲವಾರು ಆಯಾಮಗಳು ಇವೆ. ‘‘ಬ್ಲಾಕ್‌ಚೈನ್ ಮೂಲ ಸೌಕರ್ಯಗಳು ಈಗ ಹೆಚ್ಚು ಪ್ರಬುದ್ಧವಾಗಿವೆ.  ಎನ್‌ಎಫ್‌ಟಿಗಳು ಜನಪ್ರಿಯವಾಗುತ್ತಿವೆ. ಕೋವಿಡ್ ನಡುವೆ ಇವುಗಳ ಮೌಲ್ಯ ಗಣನೀಯ ಏರಿಕೆಯಾಗಿದೆ. ಹೊಸ ಇಂಟರ್‌ನೆಟ್ (ವೆಬ್‌೩) ಮತ್ತು ಹೊಸ ಹಣಕಾಸು ಪದ್ಧತಿ (ಡಿಫೈ ಅಥವಾ ವಿಕೇಂದ್ರೀಕೃತ ಹಣಕಾಸು) ಸ್ವರೂಪ ಪಡೆಯುತ್ತಿದೆ’’ ಎನ್ನುತ್ತಾರೆ ಗ್ಲೋಬಲ್ ಬ್ಲಾಕ್‌ಚೈನ್ ಅಂಟ್ಲೆರ್‌ನ ಪಾಲುದಾರರಾದ ನಿತಿನ್ ಶರ್ಮಾ. ಅಂಟ್ಲೆರ್ ಸಂಸ್ಥೆಯು ಕ್ರಿಪ್ಟೊ ಪ್ಲಾಟ್‌ಫಾರ್ಮ್ ಫ್ಲಿಂಟ್‌ನಲ್ಲಿ  ಜನವರಿಯಲ್ಲಿ ನಡೆದ ೫.೧ ದಶಲಕ್ಷ ಡಾಲರ್ ಹೂಡಿಕೆಯಲ್ಲಿ ಭಾಗವಹಿಸಿತ್ತುಘಿ. ನಿಯಂತ್ರಕ ವ್ಯವಸ್ಥೆಯ ತೂಗುಯ್ಯಾಲೆ

೨೦೧೭ರಲ್ಲಿ ಕ್ರಿಪ್ಟೊ ವಲಯದಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದ ಶರ್ಮಾ ಅವರ ಪ್ರಕಾರ ನಿಯಂತ್ರಕ ವ್ಯವಸ್ಥೆಯಲ್ಲಿ ಸ್ಪಷ್ಟತೆ ಮೂಡಲು ಹಲವು ವರ್ಷಗಳು ತೆಗೆದುಕೊಳ್ಳುತ್ತದೆ. ‘‘ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಹಲವು ವರ್ಷಗಳು ಬೇಕಾಗುತ್ತದೆ ಎನ್ನುತ್ತಾರೆ ಅವರು. ಭಾರತದಲ್ಲಿ ಹೇರಳ ಸಂಖ್ಯೆಯಲ್ಲಿ ತಂತ್ರಜ್ಞರು ಲಭ್ಯರಿರುವುದು ಕೂಡ ಕ್ರಿಪ್ಟೊ ವಲಯದಲ್ಲಿ ಹೂಡಿಕೆ ಹೆಚ್ಚಳಕ್ಕೆ ಕಾರಣಗಳಲ್ಲೊಂದಾಗಿದೆ ಎನ್ನುತ್ತಾರೆ ಅವರು.

‘‘ವಿಸಿ ಮತ್ತು ಪಿಇ ಹೂಡಿಕೆದಾರರು ತಂತ್ರಜ್ಞಾನದ ವಿಷಯಗಳಲ್ಲಿ ತಿಳುವಳಿಕೆ ಹೊಂದಿರುತ್ತಾರೆ. ಆಸಕ್ತರಾಗಿರುತ್ತಾರೆ. ಅದರ ಬೆಳವಣಿಗೆಯನ್ನು ಗ್ರಹಿಸಬಲ್ಲವ ರಾಗಿರುತ್ತಾರೆ. ಈ ವಲಯವು ಪ್ರತಿಭಾವಂತರನ್ನು ಆಕರ್ಷಿಸುತ್ತಿದೆ.  ಚಾರಿತ್ರಿಕವಾಗಿ ಪ್ರತಿಭಾವಂತರನ್ನು ಹೂಡಿಕೆ ಅನುಸರಿಸುತ್ತದೆ’’ ಎನ್ನುತ್ತಾರೆ  ಕಾನೂನು ಸಂಸ್ಥೆ ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್‌ನ ಪಾಲುದಾರರಾದ ಮಾನವ್ ನಾಗರಾಜ್.

‘‘ಕ್ರಿಪ್ಟೊ ಸ್ಟಾರ್ಟಪ್‌ಗಳು  ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಗಳಿಗೆ ಬ್ಯಾಕ್ ಎಂಡ್ ಮಾದರಿಯ ಸೇವೆಗಳನ್ನೂ ಒದಗಿಸಬಲ್ಲವು. ಹೀಗಾಗಿ ಭಾರತದಲ್ಲಿ ನಿಬಂಧಗಳಿದ್ದರೂ ಜಾಗತಿಕ ಮಟ್ಟದ ಸೇವೆ ಒದಗಿಸಲು ಸಾಧ್ಯವಾಗುತ್ತದೆ.  ಎಲ್ಲ ಕ್ರಿಪ್ಟೊ ಸ್ಟಾರ್ಟಪ್‌ಗಳು ಉತ್ಪನ್ನಗಳನ್ನು ಬಿಡುಗಡೆ ಮಾಡುವುದಿಲ್ಲಘಿ. ಇಂಥ ಆಯಾಮವೂ ಇರುತ್ತದೆ’’ ಎನ್ನುತ್ತಾರೆ ನಾಗರಾಜ್.   ಕಾಯಿನ್ ಡಿಸಿಎಕ್ಸ್‌ನ ಕಾರ್ಯಕಾರಿ ನಿರ್ದೇಶಕ ಹಾಗೂ ಬಿಎಸಿಸಿ ಸದಸ್ಯರಾದ ಮನಹಾರ ಗೇರ್‌ಗ್ರಾಟ್, ‘‘ದೊಡ್ಡ ಹೂಡಿಕೆಗಳು ಅಪಾಯದ ಸಾಧ್ಯಾಸಾಧ್ಯತೆಗಳ ಬಗ್ಗೆಯೂ ಲೆಕ್ಕಾಚಾರವನ್ನು ಹೊಂದಿರುತ್ತವೆ’’ ಎನ್ನುತ್ತಾರೆ. ಕೆಲವು ದೇಶಗಳು ಕ್ರಿಪ್ಟೊ ಬಗ್ಗೆ ಪ್ರತಿಕೂಲ ದೃಷ್ಟಿಕೋನ ಹೊಂದಿದ್ದರೂ, ಇತರ ರಾಷ್ಟ್ರಗಳಲ್ಲಿ ಮುಂದುವರಿಯುತ್ತದೆ’’ ಎನ್ನುತ್ತಾರೆ ಅವರು.

ಕ್ರಿಪ್ಟೊ ಕುರಿತ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ www.TimesDecrypt.com


ಹೂಡಿಕೆ ಹೆಚ್ಚಳಕ್ಕೆ ಕಾರಣವೇನು?

⮚  ಸುಪ್ರೀಂಕೋರ್ಟ್ ೨೦೨೦ರ ಮಾರ್ಚ್‌ನಲ್ಲಿ  ಆರ್‌ಬಿಐನ ನಿಷೇಧವನ್ನು ತೆರವುಗೊಳಿಸಿತು. ಇದು ಮಹತ್ವದ ತಿರುವಾಗಿ ಪರಿಣಮಿಸಿತು.

⮚ ಕ್ರಿಪ್ಟೊ ಕಂಪನಿಗಳ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದು.

⮚ ಬ್ಲಾಕ್‌ಚೈನ್ ತಂತ್ರಜ್ಞಾನ ಮತ್ತು ಎನ್‌ಎಫ್‌ಟಿಗಳ 

ಜನಪ್ರಿಯತೆ ಬಗ್ಗೆ ಹೂಡಿಕೆದಾರರಲ್ಲಿ ಜಾಗೃತಿ. ಭಾರತದಲ್ಲಿ ಕ್ರಿಪ್ಟೊಗಳು ನಿಯಂತ್ರಿತವಾಗಬಹುದೇ ಹೊರತು ನಿಷೇಧ ಆಗದು ಎಂಬ ವಿಶ್ವಾಸ.


⮚  ಕ್ರಿಪ್ಟೊ ಕಂಪನಿಗಳು ೨೦೨೧ರಲ್ಲಿ ವಿಶ್ವಾದ್ಯಂತ ೩೪ ಶತಕೋಟಿ ಡಾಲರ್ ಹೂಡಿಕೆ ಗಳಿಸಿವೆ.  ಇದು ಕಳೆದ ಕೆಲ ವರ್ಷಗಳ ಒಟ್ಟು ಹೂಡಿಕೆಗಿಂತಲೂ ಹೆಚ್ಚುಘಿ.  ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹೂಡಿಕೆ ಅಮೆರಿಕದಲ್ಲಿ ಆಗಿದೆ.

#kannada

Share the article on:

  • Facebook
  • Twitter
  • LinkedIn
  • WhatsApp

Related articles

  • ಕ್ರಿಪ್ಟೊ ಬಗ್ಗೆ ಬಹುತೇಕ ರಾಷ್ಟ್ರಗಳಿಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇಕೆ
  • ಭಾರತದಲ್ಲಿ ಕ್ರಿಪ್ಟೊ ವಹಿವಾಟು ಕಾನೂನು ಬಾಹಿರವಲ್ಲ
  • ಕ್ರಿಪ್ಟೊ ಸಂಪೂರ್ಣ ನಿಷೇಧಕ್ಕೆ ಆರ್‌ಬಿಐ ಒಲವು, ತಜ್ಞರ ಆಕ್ಷೇಪ
  • ತೆರಿಗೆ ಮತ್ತು ವಿಧಾನ: ಕ್ರಿಪ್ಟೊ ಹೂಡಿಕೆದಾರರಿಗೆ ಬಜೆಟ್ ಹೇಗೆ ಮಿಶ್ರ ಫಲ
  • ಅಪಾಯದ ಹೊರತಾಗಿಯೂ ಯುವ ಹೂಡಿಕೆದಾರರನ್ನು ಸೆಳೆಯುತ್ತಿರುವ ಕ್ರಿಪ್ಟೋ ಟೆಕ್ ಬ್ಲಾಕ್‌ಚೈನ್

Top categories

  • Crypto NEWS
  • Cryptocurrency
  • Blockchain
  • Economic
  • Legal

Read in your language

  • Bengali
  • Gujarati
  • Hindi
  • Kannada
  • Marathi

Stay up to date

Subscribe to our newsletter

Resources

  • Blockchain
  • Cryptocurrency
  • Legal
  • Crypto NEWS
  • Featured Videos

Important links

  • Ask an Expert
  • Webinars
  • About
  • Resources
  • Contact

Follow us

Catch the exclusive Times Decrypt coverage in TOI newspaper every Wednesday.

To start the doorstep delivery of your copy of TOI, visit subscribe.timesgroup.com

© Times Decrypt - All rights reserved. Powered by Leo Digital