ಕಳೆದ ೨೦೨೧ರ ಮಾರ್ಚ್‌ನಲ್ಲಿ ವಿ.ಎಸ್ ಗೈಟಿನೋಡ್ ಅವರು ೧೯೬೧ರಲ್ಲಿ ರಚಿಸಿದ ತೈಲ ವರ್ಣಚಿತ್ರವು ೫ ದಶಲಕ್ಷ ಡಾಲರ್ ಮೌಲ್ಯಕ್ಕೆ ಮಾರಾಟವಾಯಿತು. ಇದು ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಭಾರತೀಯ ಕಲಾಕೃತಿ ಎಂದೆನ್ನಿಸಿತು. ಅದೇ ತಿಂಗಳು ಕ್ರಿಸ್ಟೀಸ್ ಹರಾಜು ಕೇಂದ್ರವು ಮೊಟ್ಟ ಮೊದಲ ಬಾರಿಗೆ ಡಿಹಿಟಲ್ ಕಲಾಕೃತಿಯೊಂದನ್ನು ೬೯ ದಶಲಕ್ಷ ಡಾಲರ್‌ಗೆ ಮಾರಾಟ ಮಾಡಿತು. ಇದು ಕೇವಲ ದಾಖಲೆ ಮಾತ್ರವಾಗಿರಲಿಲ್ಲಘಿ, ಆದರೆ ಎನ್‌ಎಫ್‌ಟಿ ಎಂಬ ಬ್ಲಾಕ್‌ಚೈನ್ ಅಪ್ಲಿಕೇಷನ್ ಅನ್ನೂ ತಕ್ಷಣದಿಂದಲೇ ಜನಪ್ರಿಯಗೊಳಿಸಿತು.
ಎನ್‌ಎಫ್‌ಟಿ ಅಥವಾ ನಾನ್-ಫಂಜಿಬೆಲ್ ಟೋಕನ್‌ಗಳು ವಿಶಿಷ್ಟವಾದ ಡಿಜಿಟಲ್ ಸಾಧನವಾಗಿದ್ದು, ಅವುಗಳನ್ನು ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದೇ ನೆಟ್‌ವರ್ಕ್ ಕ್ರಿಪ್ಟೊ ಕರೆನ್ಸಿಗಳನ್ನೂ ನಡೆಸುತ್ತದೆ. ಯಾವುದೇ ಡಿಜಿಟಲ್ ಚಿತ್ರಗಳು, ವಿಡಿಯೊ, ಸಂಗೀತ, ಈ ಲೇಖನದ ಆನ್‌ಲೈನ್ ಮಾದರಿಯನ್ನೂ ಒಳಗೊಂಡಂತೆ ಡಿಜಿಟಲ್ ರೂಪದಲ್ಲಿ ಇರುವುದನ್ನು ಎನ್‌ಎಫ್‌ಟಿಗೆ ರೂಪಾಂತರಿಸಬಹುದು ಹಾಗೂ ನಗದೀಕರಿಸಿಕೊಳ್ಳಬಹುದು. ಎನ್‌ಎಫ್‌ಟಿಗಳು ಡಿಜಿಟಲ್ ಕಲೆಯಲ್ಲಘಿ, ಆದರೆ ದೃಢೀಕರಣಕ್ಕೆ ಪ್ರಮಾಣಪತ್ರಗಳ ಪರ್ಯಾಯವಾಗಿ ಬಳಸಬಹುದು. ವಿಕೆಂದ್ರೀಕೃತ ಬ್ಲಾಕ್‌ಚೈನ್‌ನಲ್ಲಿ ಉಪಯೋಗಿಸಬಹುದು. ಇದನ್ನು ಎರಡನೆಯ ದೊಡ್ಡ ಕ್ರಿಪ್ಟೊ ಕರೆನ್ಸಿಗಳಂತೆ ಬಳಸಬಹುದು. ಕ್ರಿಪ್ಟೊಗಳಂತೆ ಎನ್‌ಎಫ್‌ಟಿಗಳಲ್ಲಿ ವಹಿವಾಟು ನಡೆಸುವುದಕ್ಕೆ ಕಾನೂನು ಮಾನ್ಯತೆ ಇನ್ನೂ ಲಭಿಸಿಲ್ಲ. ನಿಯಂತ್ರಕ ವ್ಯವಸ್ಥೆಯ ಕೊರತೆಯಿಂದಾಗಿ ದರಗಳಲ್ಲಿ ಏರಿಳಿತ ಉಂಟಾಗುವ ಸಾಧ್ಯತೆ ಇರುತ್ತದೆ.
ಇಂಟರ್‌ನೆಟ್ ಬಳಕೆಯ ಹೆಚ್ಚಳ ಮತ್ತು ಕ್ರಿಪ್ಟೊಗಳ ಬಗ್ಗೆ ಉಂಟಾಗಿರುವ ಕುತೂಹದಲ ಪರಿಣಾಮ ಎನ್‌ಎಫ್‌ಟಿಗಳ ಜನಪ್ರಿಯತೆ ಕೂಡ ವೃದ್ಧಿಸಿದೆ. ‘‘ ಕ್ರಿಪ್ಟೊಗಳಲ್ಲಿ ಹಣ ಹೂಡಿರುವ ಹಲವಾರು ಮಂದಿ ಗ್ರಾಹಕರು, ಹೂಡಿಕೆಯ ಹೊಸ ಸಾಧನವಾಗಿ ಎನ್‌ಎಫ್‌ಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎನ್‌ಎಫ್‌ಟಿಗಳ ಜನಪ್ರಿಯತೆಗೆ ಗಣ್ಯ ವ್ಯಕ್ತಿಗಳಿಂದ ಬಳಕೆಯಾಗಿರುವುದೂ ಕಾರಣವಾಗಿದೆ. ಟ್ವಿಟರ್‌ನ ಸಹ ಸಂಸ್ಥಾಪಕ ಜಾಕ್ ಡೋರ್ಸಿ, ಪ್ಯಾರಿಸ್ ಹಿಲ್ಟನ್, ಸ್ನೂಪ್ ಡೋಗ್ ಅವರು ತಮ್ಮ ಎನ್‌ಎಫ್‌ಟಿಗಳನ್ನು ಮಾರಾಟ ಮಾಡಿದಾಗ ಅದು ಜನಪ್ರಿಯವಾಗಿತ್ತುಘಿ’’ ಎನ್ನುತ್ತಾರೆ ಎನ್‌ಎಫ್‌ಟಿ ಮಾರುಕಟ್ಟೆ ವಲಯದಲ್ಲಿರುವ ಚಿಂಗಾರಿಯ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಸುಮಿತ್ ಘೋಷ್. ೨೦೨೧ರಲ್ಲಿ ಸಲ್ಮಾನ್ ಖಾನ್ ಇದಕ್ಕೆ ಚಾಲನೆ ನೀಡಿದ್ದರು.
ಕಲೆ ಹಾಗೂ ಸಂಗ್ರಹಕ್ಕಾಗಿ ಮಾತ್ರವಲ್ಲದೆ ಕೆಲವರು ಎನ್‌ಎಫ್‌ಟಿಯನ್ನು ಟೋಕನ್‌ನ ಮೌಲ್ಯ ವೃದ್ಧಿಯ ಪ್ರಯೋಜನ ಪಡೆಯಲು ಖರೀದಿಸುತ್ತಾರೆ. ‘‘ ಕ್ರಿಪ್ಟೊ ಮಾರುಕಟ್ಟೆಯಲ್ಲಿ ಬಂಡವಾಳದ ಮೌಲ್ಯ ವೃದ್ಧಿಯಾಗಿದ್ದರಿಂದ, ಎನ್‌ಎಫ್‌ಟಿಯ ಜನಪ್ರಿಯತೆಯೂ ಹೆಚ್ಚುತ್ತಿದೆ’’ ಎನ್ನುತ್ತಾರೆ ಬ್ಲಾಕ್‌ಚೈನ್ ಆ್ಯಂಡ್ ಕ್ರಿಪ್ಟೊ ಅಸೆಟ್ಸ್ ಕೌನ್ಸಿಲ್‌ನ (ಬಿಎಸಿಸಿ) ಸದಸ್ಯ ಮತ್ತು ಎಕ್ಸ್‌ಫಿನಿಟ್‌ನ ಮುಖ್ಯ ಎಕೊಸಿಸ್ಟಮ ಅಕಾರಿಯಾದ ಸಂತೋಷ್ ಯೆಲ್ಲಾಜೊಸುಲಾ. ಮಾರುಕಟ್ಟೆಯಲ್ಲಿ ಅಲ್ಪಾವಗೆ ಎನ್‌ಎಫ್‌ಟಿ ದರದ ಸಂಚಲನ ಉಂಟಾಗಬಹುದು ಎಂದಿದ್ದಾರೆ. ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದ ಲಾಕ್ ಡೌನ್ ಅವಯಲ್ಲಿ ಡಿಜಿಟಲ್ ಕಲೆಗೆ ಜನತೆಯಲ್ಲಿ ಆಸಕ್ತಿ ಉಂಟಾಗಿದ್ದರಿಂದ ಎನ್‌ಎಫ್‌ಟಿ ಕೂಡ ಜನಪ್ರಿಯವಾಯಿತು. ಕ್ರಿಪ್ಟೊವನ್ನು ಬೆಂಬಲಿಸದವರೂ ಎನ್‌ಎಫ್‌ಟಿ ಬಗ್ಗೆ ಆಸಕ್ತಿ ವಹಿಸುವಂತಾಯಿತು.
ಎನ್‌ಎಫ್‌ಟಿಯಿಂದ ಡಿಜಿಟಲ್ ಕಂಟೆಂಟ್ ಸೃಷ್ಟಿಸುವವರು ಮತ್ತು ಬೌದ್ಧಿಕ ಆಸ್ತಿಗಳ (ಐಪಿ) ಮಾಲೀಕರು ತಮ್ಮ ಆಸ್ತಿಗಳನ್ನು ಯಾವುದೇ ‘ಮಧ್ಯವರ್ತಿ’ಗಳ ಸೇವೆ ಪಡೆಯದೆ ನಗದೀಕರಿಸಿಕೊಳ್ಳಬಹುದು. ಎನ್‌ಎಫ್‌ಟಿ ಪ್ರತಿ ಸಲ ಮರು ಮಾರಾಟವಾದಾಗಲೂ ಗೌರವಧನ ಪಡೆಯಬಹುದು.‘‘ಎನ್‌ಎಫ್‌ಟಿಯು ಡಿಜಿಟಲ್ ಕಂಟೆಂಟ್‌ಗಳನ್ನು ಭಿನ್ನ ಡಿಜಿಟಲ್ ವಸ್ತುವಾಗಿಸುತ್ತದೆ. ಹೀಗಾಗಿ ಐಪಿಯನ್ನು ನಗದೀಕರಿಸಲು ಸಾಧ್ಯವಾಗುತ್ತದೆ’’ ಎನ್ನುತ್ತಾರೆ ಇಂಡಿಯನ್ ಸ್ಪೋರ್ಟ್ಸ್ ಎನ್‌ಎಫ್‌ಟಿ ಕಂಪನಿಯ ಸಿಇಒ ಒಬ್ಬರು.
ವಿಶ್ವದ ಅತ್ಯಂತ ದುಬಾರಿ ಎನ್‌ಎಫ್‌ಟಿಯನ್ನು ಕ್ರಿಸ್ಟೀಸ್‌ನಲ್ಲಿ ಮಾರಶಾಟ ಮಾಡಲಾಗಿದೆ. ಅಮೆರಿಕದ ಕಲಾವಿದ ಬೀಪ್ಲ್ ಅವರ ೫,೦೦೦ ಚಿತ್ರ ಕಲಾಕೃತಿಗಳು ಮಾರಾಟವಾಗಿವೆ. ಅದನ್ನು ನೋಡಿದವರೆಲ್ಲರೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ ವಾಸ್ತವವಾಗಿ ಅದರ ಮಾಲೀಕರು ಒಬ್ಬರೇ ಆಗಿರುತ್ತಾರೆ. ಅದರ ಮಾಲಿಕತ್ವದ ಡೇಟಾವನ್ನು ವಿಕೆಂದ್ರೀಕೃತ ಬ್ಲಾಕ್‌ಚೈನ್ ನೆಟ್‌ವರ್ಕ್ ಎನ್‌ಎಫ್‌ಟಿಯಲ್ಲಿ ಸಂಗ್ರಹಿಸಿಡಲಾಗುತ್ತದೆ.
ಕಳೆದ ೨೦೨೧ರಲ್ಲಿ ಎನ್‌ಎಫ್‌ಟಿ ವ್ಯಾಪಾರ ೨೫ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತುಘಿ. ಅದಕ್ಕೂ ಹಿಂದಿನ ವರ್ಷದಲ್ಲಿ ೯೫ ದಶಲಕ್ಷ ಡಾಲರ್‌ನಷ್ಟಿತ್ತುಘಿ ಎಂದು ರಾಯ್ಟರ್ಸ್ ವರದಿ ತಿಳಿಸಿದೆ. ಉದ್ಯಮ ವಲಯದ ತಜ್ಞರ ಪ್ರಕಾರ, ಆನ್‌ಲೈನ್ ಜಗತ್ತಿನಲ್ಲಿ ಎನ್‌ಎಫ್‌ಟಿಗಳ ರೂಪದಲ್ಲಿ ‘ಹಕ್ಕು ಸ್ವಾಮ್ಯ ’ ಗಳಿಸುವ ಭರಾಟೆ ಹೆಚ್ಚುತ್ತಿದೆ.
ಕಳೆದ ನವೆಂಬರ್‌ನಲ್ಲಿ ಅಮಿತಾಭ್ ಬಚ್ಚನ್ ಅವರ ನಿರೂಪಣೆಯ ಕವನಗಳ ಸಂಗ್ರಹ ‘ಮಧು ಶಾಲಾ’ ದಾಖಲೆಯ ಮೌಲ್ಯದಲ್ಲಿ ಹರಾಜಾಗಿತ್ತುಘಿ. ಇತರ ತಾರೆಯರಾದ ಸಲ್ಮಾನ್ ಖಾನ್ ಮತ್ತು ಸೋನು ನಿಗಮ್ ಅವರೂ ಕೂಡ ಎನ್‌ಎಫ್‌ಟಿ ಆರಂಭಿಸಿದ್ದಾರೆ.
ಕ್ರಿಪ್ಟೊ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: www.TimesDecrypt.com
ವರ್ಚುವಲ್ ಹೆಮ್ಮೆಯ ಹಕ್ಕುಗಳು
⮚ ಎನ್‌ಎಫ್‌ಟಿಗಳು ಅಥವಾ ನಾನ್- ಫಂಜಿಬೆಲ್ ಟೋಕನ್‌ಗಳು ವಿಶಿಷ್ಟ ಡಿಜಿಟಲ್ ಸಾಧನಗಳಾಗಿದ್ದುಘಿ, ಬ್ಲಾಕ್‌ಚೈನ್ ಜತೆ ಸಂಪರ್ಕ ಹೊಂದಿರುತ್ತವೆ. ಇದೇ ನೆಟ್‌ವರ್ಕ್ ಕ್ರಿಪ್ಟೊ ಕರೆನ್ಸಿಗಳನ್ನು ನಿರ್ವಹಿಸುತ್ತದೆ.
⮚ ಡಿಜಿಟಲ್ ಚಿತ್ರಗಳು, ವಿಡಿಯೊಗಳು ಮತ್ತು ಹಾಡುಗಳನ್ನು ಎನ್‌ಎಫ್‌ಟಿ ಆಗಿ ಪರಿವರ್ತಿಸಬಹುದು ಮತ್ತು ನಗದೀಕರಿಸಿಕೊಳ್ಳಬಹುದು.
⮚ ಎನ್‌ಎಫ್‌ಟಿ ಮೂಲ ಡಿಜಿಟಲ್ ಕಲೆ ಅಲ್ಲದಿದ್ದರೂ, ಕಲೆಯ ಡಿಜಿಟಲ್ ದೃಢೀಕರಣದೊಂದಿಗೆ ಮರಾಟ ಯೋಗ್ಯವಾಗಿಸಬಹುದು.
⮚ ಕ್ರಿಪ್ಟೊಗಳಂತೆಯೇ, ಎನ್‌ಎಫ್‌ಟಿಗೆ ಸದ್ಯಕ್ಕೆ ಕಾನೂನು ಬೆಂಬಲ ದೊರೆಯುತ್ತಿಲ್ಲಘಿ. ನಿಯಂತ್ರಕ ವ್ಯವಸ್ಥೆಯ ಕೊರತೆಯಿಂದ ದರಗಳಲ್ಲಿ ಸಂಚಲನ ನಿರೀಕ್ಷಿಸಬಹುದು.
⮚ ಎನ್‌ಎಫ್‌ಟಿಗಳು ೨೦೨೧ರಲ್ಲಿಮಕ್ರಿಪ್ಟೊಗಳ ಜತೆಗೆ ಜನಪ್ರಿಯತೆ ಗಳಿಸಿತು. ಡಿಜಿಟಲ್ ಟೋಕನ್ ಖರೀದಿಸುವುದು, ಅವುಗಳ ‘ಹೆಮ್ಮೆಯ ಮಾಲಿಕತ್ವ’ ಗಖಳಿಸುವುದು ವರ್ಚುವಲ್ ಜಗತ್ತಿನಲ್ಲಿ ಜನಪ್ರಿಯವಾಯಿತು.
⮚ ೨೦೨೧ರ ಮಾರ್ಚ್‌ನಲ್ಲಿ ಅತ್ಯಂತ ದುಬಾರಿ ಡಿಜಿಟಲ್ ಎನ್‌ಎಫ್‌ಟಿ ಮಾರಾಟ ೬೯ ದಶಲಕ್ಷ ಡಾಲರ್‌ಗೆ ನಡೆಯಿತು. ೫,೦೦೦ ಛಾಯಾಚಿತ್ರಗಳ ಮಾರಾಟ ನಡೆಯಿತು.
⮚ ಟ್ವಿಟರ್ ಸಹ ಸಂಸ್ಥಾಪಕ ಜಾಕ ಡೋರ್ಸಿ, ನಟ ಅಮಿತಾಭ್ ಬಚ್ಚನ್ ಎನ್‌ಎಫ್‌ಟಿಗಳನ್ನು ಮಾರಾಟ ಮಾಡಿದ್ದಾರೆ. ಕೋಕಾ ಕೋಲಾ, ಗ್ಯುಸಿಸಿ ಮೊದಲಾದ ಬ್ರ್ಯಾಂಡ್‌ಗಳೂ ಎನ್‌ಎಫ್‌ಟಿಗಳನ್ನು ಮಾರಾಟ ಮಾಡಿವೆ.